ADVERTISEMENT

ಮೂಲಸೌಕರ್ಯ ಕೊರತೆ: ಪಂಚಾಯಿತಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 7:03 IST
Last Updated 11 ಜುಲೈ 2013, 7:03 IST

ಕೊಳ್ಳೇಗಾಲ: ರೇಷ್ಮೆ ನೂಲು ಬಿಚ್ಚಾಣಿಕೆದಾರರ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ 13ನೇ ವಾರ್ಡ್ ದೇವಾಂಗ ಪೇಟೆ ನಿವಾಸಿಗಳು ಬುಧವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದರು.

ಬಡಾವಣೆ ನಿರ್ಮಾಣಗೊಂಡು 2 ದಶಕಗಳೇ ಕಳೆದರೂ ಈ ಬಡಾಣೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಬಡಾವಣೆಯಲ್ಲಿ 25 ಮನೆಗಳಿದ್ದು 150ಕ್ಕೂ ಹೆಚ್ಚು ಜನಸಂಖ್ಯೆ ಇದೆ.

ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಬಡಾವಣೆಯಲ್ಲಿ ಕೊರೆಸಲಾಗಿರುವ 2 ಕೊಳವೆಬಾವಿಗಳು ಅಂತರ್ಜಲ ಕುಸಿತದಿಂದ ಬರಿದಾಗಿವೆ. ಈ ಬಡಾವಣೆಗೆ ಕಾವೇರಿ ನೀರು ಪೂರೈಸಲು ಖಾಸಗಿ ಜಮೀನಿನವರು ಅವಕಾಶ ನೀಡದ ಕಾರಣ ಈ ಬಡಾವಣೆಯ ಜನತೆ ಸಂಕಷ್ಟದಲ್ಲಿ ಸಿಲುಕಿ ನೀರಿಗಾಗಿ ಪರದಾಡುವಂತಾಗಿದೆ. ಬಡಾವಣೆಯಲ್ಲಿ ಬೀದಿ ದೀಪ, ಚರಂಡಿ ಅವ್ಯವಸ್ಥೆಯನ್ನು ಸರಿಪಡಿಸಲು ಪಟ್ಟಣ ಪಂಚಾಯಿತಿ ಗಮನ ಹರಿಸದಿರುವುದನ್ನು ಖಂಡಿಸಿದರು.

ಬಡಾವಣೆ ಮುಖಂಡರಾದ ಗೋವಿಂದಪ್ಪ, ವೆಂಕಟೇಶ್, ಲಕ್ಷ್ಮೀನಾರಾಯಣ್, ಸುಂದ್ರ, ಶ್ರೀನಿವಾಸ, ರಂಗಮ್ಮ, ಮುತ್ತಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.