ADVERTISEMENT

ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 31 ಮೇ 2012, 5:15 IST
Last Updated 31 ಮೇ 2012, 5:15 IST

ಚಾಮರಾಜನಗರ: ರಾಜ್ಯ ಸರ್ಕಾರ ದಿಂದ ಸ್ಥಾಪನೆಗೊಂಡಿರುವ ಮೈಸೂರಿನ ರಂಗಾಯಣದಿಂದ ಒಂದು ವರ್ಷದ ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್ ಅಧ್ಯಯನಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಂಗಶಿಕ್ಷಣ ಕುರಿತ ಡಿಪ್ಲೊಮಾ ಕೋರ್ಸ್‌ಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮಾನ್ಯತೆ ನೀಡಿದೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದ್ದು, 18ರಿಂದ 28ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆಯ್ಕೆ ಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 2 ಸಾವಿರ ರೂ ವಿದ್ಯಾರ್ಥಿವೇತನ ಹಾಗೂ ಉಚಿತ ವಸತಿ ನೀಡಲಾ ಗುವುದು.

ಅಭ್ಯರ್ಥಿಗಳ ಪ್ರತಿಭೆ ಮತ್ತು ರಂಗಾಸಕ್ತಿಯನ್ನು ಪ್ರಧಾನವಾಗಿ ಪರಿಗಣಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸರ್ಕಾ ರದ ನಿಯಮಾನುಸಾರ ಮೀಸಲಾತಿ ಕ್ರಮವನ್ನು ಅನುಸರಿಸಲಾಗುತ್ತದೆ.

ಯಶಸ್ವಿಯಾಗಿ ರಂಗಶಿಕ್ಷಣ ಪೂರೈಸಿದ ವಿದ್ಯಾರ್ಥಿಯು ಹೆಚ್ಚಿನ ವೃತ್ತಿಪರ ನಟನಾ ಪರಿಣತಿ, ತರಬೇತಿಗಾಗಿ ರಂಗಾಯಣದ ರೆಪರ್ಟರಿಯಲ್ಲಿ ಒಪ್ಪಂದದ ಮೇಲೆ ಕಿರಿಯ ಕಲಾವಿದ ನಾಗಿ 2 ವರ್ಷ ಕಾಲ ಸೇವೆ ಸಲ್ಲಿಸ ಬೇಕು. ಸೇವಾವಧಿಯಲ್ಲಿ ನಿಗದಿತ ಸಂಭಾವನೆ ನೀಡಲಾಗುತ್ತದೆ. ಸೇವಾವಧಿ ಪೂರ್ಣಗೊಂಡ ಬಳಿಕ ವೃತ್ತಿಪರ ಪರಿಣತಿ ಪ್ರಮಾಣ ಪತ್ರ ನೀಡಲಾಗುವುದು.

ರಂಗಶಾಲೆಗೆ ಸೇರಬಯಸುವವರು ರಂಗಾಯಣ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಸಲ್ಲಿಕೆಗೆ ಜೂ. 10 ಅಂತಿಮ ದಿನ. ಹೆಚ್ಚಿನ ವಿವರಕ್ಕೆ ಮೈಸೂರಿನ ಕಲಾಮಂದಿರದ ಆವರಣದ ರಂಗಾಯಣ ಕಚೇರಿ ಅಥವಾ 0821-2512639 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.