ADVERTISEMENT

ಲಂಬಾಣಿ ಜನಾಂಗದ ಅಭಿವೃದ್ಧಿಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:40 IST
Last Updated 16 ಅಕ್ಟೋಬರ್ 2012, 5:40 IST

ಚಾಮರಾಜನಗರ: `ಲಂಬಾಣಿ ಸಮಾಜದ ಅಭಿವೃದ್ಧಿಗೆ ಸಂಘದ ಪದಾಧಿಕಾರಿಗಳು ಶ್ರಮಿಸಬೇಕು~ ಎಂದು ಕರ್ನಾಟಕ ಪ್ರದೇಶ ಲಂಬಾಣಿ ಕಲ್ಯಾಣ ಸಂಘದ ಕಾರ್ಯಾಧ್ಯಕ್ಷ  ಗೋಪಾಲ್‌ನಾಯ್ಕ ಸಲಹೆ ನೀಡಿದರು.

ನಗರದ ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜೀನಲ್ಲಿ ಭಾನುವಾರ ನಡೆದ ಜಿಲ್ಲಾ ಲಂಬಾಣಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಪದಾಧಿಕಾರಿಗಳು ಸರ್ಕಾರದಿಂದ ದೊರೆ ಯುವ ಸೌಲಭ್ಯವನ್ನು ಸಮಾಜದ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಆಯ್ಕೆ: ಇದೇ ವೇಳೆ ಸಂಘದ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಮಹಿಳಾ ಲಂಬಾಣಿ ಸಂಘದ ಅಧ್ಯಕ್ಷರಾಗಿ ಬಾಯಿನೊಬಾಯಿ ಹಾಗೂ ತಾಲ್ಲೂಕು ಮಹಿಳಾ ಅಧ್ಯಕ್ಷರಾಗಿ ನಾಯ್ಕ ಜ್ಯೋತಿ ರಾಜು ಆಯ್ಕೆಯಾದರು.

ಜಿಲ್ಲಾ ಸಂಘಕ್ಕೆ ಉಪಾಧ್ಯಕ್ಷರಾಗಿ ಪಾಪನಾಯಕ್, ಕುಮಾರನಾಯ್ಕ, ರಾಜೇಂದ್ರನಾಯ್ಕ, ವೆಂಕಟೇಶ್‌ನಾಯಕ್, ಮಲ್ಲೆೀಶ್‌ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮಹದೇವನಾಯ್ಕ, ಖಜಾಂಚಿಯಾಗಿ ಕೆ.ಮಹದೇವನಾಯ್ಕ, ಸಹ ಕಾರ್ಯದರ್ಶಿಯಾಗಿ ರಾಜುನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಶಂಕರ್‌ನಾಯ್ಕ ಆಯ್ಕೆಯಾದರು.

ತಾಲ್ಲೂಕು ಸಂಘದ ಅಧ್ಯಕ್ಷರಾಗಿ ಡಿ. ನಾಗೇಶ್‌ನಾಯ್ಕ, ಉಪಾಧ್ಯಕ್ಷರಾಗಿ ಸಂತೋಷ್‌ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮಣಿನಾಯ್ಕ, ಸಹ ಕಾರ್ಯದರ್ಶಿಯಾಗಿ ಲೋಕೇಶ್‌ನಾಯ್ಕ, ಖಜಾಂಚಿಯಾಗಿ ಸಾಮು ನಾಯ್ಕ, ಸಂಘಟನಾ ಕಾರ್ಯ ದರ್ಶಿಯಾಗಿ ಸಿದ್ದರಾಜುನಾಯ್ಕ, ಸುರೇಶ್‌ನಾಯ್ಕ, ಆರ್. ಶಂಕರ್‌ನಾಯ್ಕ ಆಯ್ಕೆಯಾದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಗಣೇಶ್‌ನಾಯ್ಕ ಅಧ್ಯಕ್ಷತೆವಹಿಸಿದ್ದರು.  ಉಲ್ಲಾಸ್, ಪಿ. ಕುಮಾರ್‌ನಾಯ್ಕ, ಲಕ್ಷ್ಮಣ್‌ನಾಯ್ಕ, ಸ್ವಾಮಿನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.