ADVERTISEMENT

ವೃದ್ಧಾಪ್ಯ ವೇತನ ಬಿಡುಗಡೆಗೆ ಆಗ್ರಹ: ಧರಣಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 7:20 IST
Last Updated 14 ಜನವರಿ 2012, 7:20 IST

ಕೊಳ್ಳೇಗಾಲ: ಸರ್ಕಾರ ನೀಡುವ ವೃದ್ಧಾಪ್ಯ, ವಿಧವಾ ಹಾಗೂ ಅಂಗ ವಿಕಲರ ವೇತನಗಳನ್ನು ತಕ್ಷಣ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಗ್ರ ಹಿಸಿ ಪಟ್ಟಣ ಭೀಮನಗರ ಮತ್ತಿತರ ಕಡೆಯ ನೂರಾರು ಮಹಿಳೆಯರು ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ ಸೆಳೆದರು.

ಒಪ್ಪೊತ್ತಿನ ಊಟಕ್ಕೂ ತೊಂದರೆ ಯಾಗಿದ್ದು, ಬಿಕ್ಷೆಬೇಡುವ ಸ್ಥಿತಿ ತಲುಪಿ ರುವುದರಿಂದ ಸರ್ಕಾರ ಈ ಹಿಂದೆ ನೀಡುತ್ತಿದ್ದ ವೇತನವನ್ನು ತಕ್ಷಣವೇ ನೀಡಲು ಮುಂದಾಗಬೇಕು ಎಂದು ಮಹಿಳೆಯರು ಅಧಿಕಾರಿಗಳನ್ನು ಒತ್ತಾ ಯಿಸಿದರು.

ಯಜಮಾನ ಚಿಕ್ಕಮಾಳಿಗೆ ಮಾತ ನಾಡಿ, ಕಡುಬಡತನದಲ್ಲಿ ಊಟಕ್ಕೂ ಗತಿಯಿಲ್ಲದೆ ಸಂಕಷ್ಟದಲ್ಲಿ ಸಿಲುಕಿರುವ ಅರ್ಹ ಫಲಾನುಭವಿಗಳಿಗೆ ವೇತನ ನಿಲುಗಡೆ ಕ್ರಮ ಸರಿಯಲ್ಲ. ಈ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸಿ ಸಂಕಷ್ಟ ದಲ್ಲಿರುವ ಬಡ ಮಹಿಳೆಯರಿಗೆ ಅಧಿಕಾರಿಗಳು ಕೂಡಲೇ ಹಣದೊರಕಿಸ ಬೇಕು ಎಂದು ಮನವಿ ಮಾಡಿದರು.
ರೈತರ ಮುಖಂಡ ಅಣಗಳ್ಳಿ ಬಸವರಾಜು ಮತ್ತು ತಾಲ್ಲೂಕು ಕಚೇರಿ ಅರುಣ್ ಮಾತನಾಡಿದರು.

ಮುಖಂಡ ಶಿವಮೂರ್ತಿ, ಶಿವಮ್ಮ, ಮಾದೇವಮ್ಮ, ಚಂದ್ರಮ್ಮ, ಪುಟ್ಟ ನಿಂಗಮ್ಮ, ಬಸಮ್ಮ, ಪುಷ್ಪಲತಾ, ಚಿಕ್ಕೂವಮ್ಮ, ನಂಜಮ್ಮ, ಮಂಜುಳ, ಪುಟ್ಟಮ್ಮ ಮಹದೇವಮ್ಮ, ದುಂಡಮ್ಮ, ಚೌಡಮ್ಮ, ಪುಟ್ಟರಾಚಮ್ಮ, ಚಿಕ್ಕ ತಾಯಮ್ಮ, ಪುಟ್ಟಸಿದ್ದಮ್ಮ ಇತರರು ಅಧಿಕಾರಿಗಳು ಕೂಡಲೇ ಹಣ ಬರುವಂತೆ ಕ್ರಮಕೈಗೊಳ್ಳಬೇಕು. ಇಲ್ಲ ವಾದಲ್ಲಿ ನಾವುಗಳು ಹಸಿವೆಯಿಂದ ಸಾಯುವ ಸ್ಥಿತಿ ದೂರ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ತಹಶೀಲ್ದಾರ್ ಪರವಾಗಿ ಮನವಿ ಸ್ವೀಕರಿಸಿ ಶಿರಸ್ತೇದಾರ್ ಮಹಾದೇವ ಮತ್ತು ಶ್ರೀನಿವಾಸ್ ಮಾತನಾಡಿ, ತಕ್ಷಣವೇ ಹಣ ಬರುವಂತೆ ಮಾಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.