ADVERTISEMENT

ಸಂಭ್ರಮದ ಶೂಲದ ಮಾರಮ್ಮನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 8:05 IST
Last Updated 25 ಮಾರ್ಚ್ 2011, 8:05 IST

ಗುಂಡ್ಲುಪೇಟೆ: ಪಡುಗೂರು ಗ್ರಾಮದ ಶೂಲದ ಮಾರಮ್ಮನ ಜಾತ್ರಾ ಮಹೋತ್ಸವ ಗುರುವಾರ ಬಹಳ ಅದ್ದೂರಿಯಾಗಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿ ರಾರು ಭಕ್ತರು ದೇವಿಯ ದರ್ಶನ ಪಡೆದರು. ಅಡವಿಮಠದ ಪಕ್ಕದ ಮದ್ದಾನ ಮಾರಮ್ಮ ಮೂರ್ತಿಯನ್ನು ಬುಧವಾರ ಪಡುಗೂರಿಗೆ ತಂದು, ಗುರುವಾರ ಬೆಳಿಗ್ಗೆ ಪರಮಾಪುರದ ಪುರಮಾರಮ್ಮನ ಮೂರ್ತಿ ತಂದರು. ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಹಾಕಿಸಿಕೊಂಡು ಮಾರಮ್ಮ ಕಾರ್ಯದಲ್ಲಿ ಭಾಗಿದಯಾದರು.

ಬೆಳಿಗ್ಗೆ 8ಕ್ಕೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗದಿಂದ ಮೆರವಣಿಗೆ ಬಂದಿತು, 11.30 ಗಂಟೆಗೆ ಗ್ರಾಮದ 5 ಜನ ಯುವಕರನ್ನು ಶೂಲಕ್ಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಭಕ್ತರು ದೇವಸ್ಥಾನದ ಸುತ್ತಮುತ್ತ ಇರುವ ಎತ್ತರದ ಕಟ್ಟಡಗಳಲ್ಲಿ ನಿಂತು ವೀಕ್ಷಿಸಿದರು. ಇದು ಈ ಜಾತ್ರೆ ವಿಶೇಷ. ಗ್ರಾಮದ ಎಲ್ಲ ಕೋಮಿನ ಜನ ಒಟ್ಟಾಗಿ ಜಾತ್ರೆ ಸಂಭ್ರಮದಲ್ಲಿ ಪಾಲ್ಗೊಂಡರು. ಜಾತ್ರೆಗಾಗಿ ಗುಂಡ್ಲುಪೇಟೆ ಯಿಂದ ವಿಶೇಷ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್‌ಗಳು ಸಂಚರಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.