ADVERTISEMENT

ಸಾವಯವ ಗೊಬ್ಬರ ಬಳಸಿದರೆ ಇಳುವರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:45 IST
Last Updated 17 ಅಕ್ಟೋಬರ್ 2012, 9:45 IST

ಕೊಳ್ಳೇಗಾಲ: ರಸಗೊಬ್ಬರ ಮತ್ತು ಕೀಟನಾಶಕಗಳ ಪರ್ಯಾಯ ಸಸ್ಯಜನ್ಯ ಸಾವಯವ ದ್ರವಗೊಬ್ಬರ ಮತ್ತು ಕೀಟನಾಶಕ ಬಳಕೆಗೆ ರೈತರು ಮುಂದಾಗಬೇಕು ಎಂದು ಟಾಪ್‌ಲೈಫ್ ಕಂಪನಿ ವಾಣಿಜ್ಯ ವ್ಯವಸ್ಥಾಪಕ ಮೂರ್ತಿ ತಿಳಿಸಿದರು.

ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಸಾವಯವ ಕೃಷಿ ಮಹತ್ವ ಕುರಿತ ರೈತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಸಾಯನಿಕ ಡಿ.ಎ.ಪಿ. ಕಾಂಪ್ಲೆಕ್ಸ್ ಗೊಬ್ಬರ ಪರ‌್ಯಾಯವಾಗಿ ಟಾಪ್‌ಲೈಫ್ ಕಂಪನಿ ಸಾವಯವ ದ್ರವರೂಪ ಗೊಬ್ಬರ ಮತ್ತು ಕೀಟನಾಶಕ ಮಾರುಕಟ್ಟೆಗೆ ತಂದಿದೆ. 14 ದೇಶಗಳಲ್ಲಿ ರೈತರು ಬಳಸುತ್ತಿದ್ದಾರೆ. ಅತಿಹೆಚ್ಚಿನ ಬೆಲೆತೆತ್ತು ರಸಾಯನಿಕ ಗೊಬ್ಬರ ಬಳಸುವ ಬದಲು ದ್ರವರೂಪ ಗೊಬ್ಬರ ಬಳಸಿ ಹೆಚ್ಚಿನ ಇಳುವರಿ ಬಗ್ಗೆ ಮಾಹಿತಿ ನೀಡಿದರು.

ರೋಟರಿ ಉಪಾಧ್ಯಕ್ಷ ಬಿ.ಕೆ. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಚೇರ‌್ಮನ್ ಕೆ. ಪುಟ್ಟರಸಶೆಟ್ಟಿ, ಕೃಪಾಶಂಕರ್, ರೈತ ಮುಖಂಡರಾದ ನರಸಿಂಹನ್, ಬಾಬು, ಕುಣಗಳ್ಳಿ ರಂಗಸ್ವಾಮಿ, ನಟರಾಜ್‌ಮಾಳಿಗೆ, ಚಾಮರಾಜು ಇತರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.