ಕೊಳ್ಳೇಗಾಲ: ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಸೂಕ್ತಕ್ರಮಕೈಗೊಳ್ಳಬೇಕು ಎಂದು ಲೋಕಸಭಾ ಚುನಾವಣೆಯ ಹನೂರು ಕ್ಷೇತ್ರದ ಸಹಾಯಕ ಚುನಾಣಾಧಿಕಾರಿಯೂ ಆದ ಜಿಲ್ಲಾ ಸಮಾಜಕಲ್ಯಾಣಧಿಕಾರಿ ರಾಜೇಶ್ ಗೌಡ ಅಧಿಕಾರಿಗಳಿಗೆ ತಿಳಿಸಿದರು.
ಮಂಗಳವಾರ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಚುನಾವಣಾ ಸಂಬಂಧ ಫ್ಲೈಯಿಂಗ್ ಸ್ಕ್ವಾಡ್ ಅಕ್ಸಿಕುಟಿವ್ ಮ್ಯಾಜಿಸ್ಟ್ರೇಟ್ ಸಭೆಯಲ್ಲಿ ಮಾತನಾಡಿದರು.
ಹನೂರು ಕ್ಷೇತ್ರದಲ್ಲಿ ವೈನ್ ಸ್ಟೋರ್‌ಗಳಲ್ಲಿ ಮಾತ್ರ ಮದ್ಯ ಮಾರಾಟ ಮಾತ್ರ ಮಾಡಬೇಕು. ಅಲ್ಲಿಯೇ ಕುಡಿಯಲು ಅವಕಾಶವಿರುವುದಿಲ್ಲ. ಅಧಿಕಾರಿಗಳು ವೈನ್ ಸ್ಟೋರಿನ ಮುಂದೆ ಕುಡಿತ ಕಂಡುಬಂದಲ್ಲಿ ಮೊದಲು ಎಚ್ಚರಿಕೆ ನೀಡುವುದು. 2ನೇ ಬಾರಿಗೆ ಕಂಡುಬಂದಲ್ಲಿ ಸ್ಥಳೀಯ ಪೋಲಿಸರ ಸಹಾಯದೊಡನೆ ವೈನ್ ಸ್ಟೋರ್ಸ್‌್‌ಗೆ ಬೀಗ ಜಡಿಯಲಾಗುವುದು ಎಂದರು.
ಅಬಕಾರಿ ಅಧಿಕಾರಿಗಳು ಮೂರು ದಿನಕ್ಕೊಮ್ಮೆ ತಪಾಸಣೆ ಮಾಡಬೇಕು ಹಾಗೂ ಅಧಿಕಾರಿಗಳು ಪ್ರತಿ ದಿನ ತಮ್ಮ ಡೈರಿಯಲ್ಲಿ ದಿನಚರಿ ಬರೆಯಬೇಕು. ಕೇಂದ್ರ ಚುನಾವಣೆಯ ಅಧಿಕಾರಿಗಳು ಪ್ರತಿ ದಿನದ ಮಾಹಿತಿಯನ್ನು ನೀಡುತ್ತಿರುವುದನ್ನು ತಿಳಿದುಕೊಳ್ಳುತ್ತಿರ ಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕೊಳ್ಳೇಗಾಲ ತಹಶೀಲ್ದಾರ್‌ಗಳಾದ ಮಾಳಿಗಯ್ಯ, ನಂಜುಂಡಯ್ಯ, ಲೆಕ್ಕಾಧಿಕಾರಿ ಬಸವಯ್ಯ, ಇನ್‌ಸ್ಪೆಕ್ಟರ್ ಮರಿಸಿದ್ದಶೆಟ್ಟಿ, ಕಿರಣ್‌ಕುಮಾರ್, ರಾಜಣ್ಣ, ಅಬಕಾರಿ ಇನ್‌ಸ್ಪೆಕ್ಟರ್ ನಟರಾಜು, ಮಹದೇಶ್ವರ ಬೆಟ್ಟದ ಪಿಡ್ಲೂಡಿ, ಎಇಇ ಕುಮಾರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.