ADVERTISEMENT

ಜನರಿಗೆ ಒಳ್ಳೆದಾಗಲಿ: ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ 102 ವರ್ಷದ ವೃದ್ಧೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 7:26 IST
Last Updated 7 ಮಾರ್ಚ್ 2024, 7:26 IST
<div class="paragraphs"><p>102 ವರ್ಷದ ವೃದ್ಧೆ</p></div>

102 ವರ್ಷದ ವೃದ್ಧೆ

   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ 102 ವರ್ಷದ ವೃದ್ಧೆಯೊಬ್ಬರು ಪಾದಯಾತ್ರೆ ಮಾಡಿ ಗಮನ ಸೆಳೆದಿದ್ದಾರೆ.

ಬುಧವಾರ ತಾಳಬೆಟ್ಟದಿಂದ ಬೆಟ್ಟದವರೆಗೆ 18 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ.

ADVERTISEMENT

ಭಕ್ತರೊಬ್ಬರು ಅಜ್ಜಿ ಪಾದಯಾತ್ರೆ ಮಾಡುತ್ತಿರುವ ವಿಡಿಯೊ ಚಿತ್ರೀಕರಿಸಿದ್ದಾರೆ. ಅವರು ತಿಪಟೂರು ಮೂಲದವರು.

‘ದೇಶಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಒಳ್ಳೆಯದಾಗಬೇಕು, ಕಾಡು ಪ್ರಾಣಿಗಳಿಗೆ ನೀರಿಲ್ಲ, ಎಲ್ಲರಿಗೂ ಒಳ್ಳೆದಾಗಬೇಕು ಎಂದು ಬೇಡಿಕೊಂಡು ಹೋಗುತ್ತಿದ್ದೇನೆ’ ಎಂದು ವೃದ್ಧೆ ಹೇಳಿದ್ದಾರೆ.

ಪ್ರಧಾನಿ ಯಾರಾಗಬೇಕು ಎಂದು ಕೇಳಿದ್ದಕ್ಕೆ ‘ಮೋದಿ ಬಂದರೆ ದೇಶಕ್ಕೆ ಒಳ್ಳೆಯದಾಗುತ್ತದೆ’ ಎಂದು ಹೇಳಿದ್ದಾರೆ.

ವಿಡಿಯೊ, ಅಜ್ಜಿಯ ಹೇಳಿಕೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.