ADVERTISEMENT

19ಕ್ಕೆ ಸುತ್ತೂರು ಜಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 8:55 IST
Last Updated 17 ಜನವರಿ 2012, 8:55 IST

ಚಾಮರಾಜನಗರ: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಜ. 19ರಿಂದ 24ರವರೆಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ.

`ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಯಶಸ್ಸಿಗೆ ಅಗತ್ಯ ಸಿದ್ಧತೆಕೈಗೊಳ್ಳಲಾಗಿದೆ. ವಸ್ತು ಪ್ರದರ್ಶನ, ಛಾಯಾಚಿತ್ರ ಸ್ಪರ್ಧೆ, ಕೃಷಿ ಮೇಳ, ಕರ್ನಾಟಕ ವೈಭವ ಕುರಿತ ಧ್ವನಿ-ಬೆಳಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆ ಯಲಿವೆ. ರಾತ್ರಿ ಗ್ರಾಮೀಣ ಪ್ರದೇಶದ ವರಿಂದ ನಾಟಕ ಪ್ರದರ್ಶನ ನಡೆಯ ಲಿದೆ~ ಎಂದು ಜಾತ್ರಾ ಸಮಿತಿಯ ಸಂಚಾಲಕ ಪ್ರೊ.ಡಿ.ಎಸ್. ಸದಾಶಿವಮೂರ್ತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ಮಠಾಧೀಶರು, ರಾಜ ಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಛಾಯಾಚಿತ್ರ ಸ್ಪರ್ಧೆಯೂ ನಡೆಯಲಿದೆ. ರಥೋ ತ್ಸವ, ತೆಪ್ಪೋತ್ಸವ, ಕೊಂಡೋತ್ಸವ, ಧಾರ್ಮಿಕ ಉತ್ಸವ ಆಯೋಜಿಸಲಾ ಗಿದೆ. ನಾಡಿನ ವಿವಿಧ ಜಿಲ್ಲೆಯ ಭಜನಾ ತಂಡಗಳು ಭಾಗವಹಿಸಲಿವೆ ಎಂದರು.

ಜ. 19ರಂದು ವಿಧ್ಯುಕ್ತವಾಗಿ ಜಾತ್ರಾ ಮಹೋತ್ಸವ ಆರಂಭವಾ ಗಲಿದೆ. ಅಂದು ಬೆಳಿಗ್ಗೆ 11ಗಂಟೆಗೆ ಸಾಂಸ್ಕೃತಿಕ ಮೇಳ, ರಂಗೋಲಿ, ಸೋಬಾನೆ ಪದ ಸ್ಪರ್ಧೆ ಹಾಗೂ ದೋಣಿ ವಿಹಾರದ ಉದ್ಘಾಟನೆ ನೆರವೇರಲಿದೆ. ಸಂಜೆ 5ಗಂಟೆಗೆ ವಸ್ತುಪ್ರದರ್ಶನ, ಕೃಷಿ ಮೇಳ, ಕರ್ನಾಟಕ ವೈಭವದ ಧ್ವನಿ-ಬೆಳಕು ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಜ. 20ರಂದು ಬೆಳಿಗ್ಗೆ 10ಗಂಟೆಗೆ ಸಾಮೂಹಿಕ ವಿವಾಹ ನಡೆಯಲಿದೆ. ಮಧ್ಯಾಹ್ನ 3ಗಂಟೆಗೆ ಕೃಷಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಜ. 21ರಂದು ಬೆಳಿಗ್ಗೆ 10.45ಕ್ಕೆ ರಥೋತ್ಸವ ಜರುಗಲಿದೆ. ಬೆಳಿಗ್ಗೆ 11.15ಕ್ಕೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಮಧ್ಯಾಹ್ನ 3ಗಂಟೆಗೆ ರಾಜ್ಯಮಟ್ಟದ 20ನೇ ಭಜನಾ ಮೇಳ ಆಯೋಜಿಸಲಾಗಿದೆ. ಸಂಜೆ 4.30ಗಂಟೆಗೆ ಜೆಎಸ್‌ಎಸ್ ಅಂತರ ಸಂಸ್ಥೆಗಳ 19ನೇ ಕ್ರೀಡಾಕೂಟ ನಡೆಯಲಿದೆ ಎಂದರು.

ಜ. 22ರಂದು ಬೆಳಿಗ್ಗೆ 11ಗಂಟೆಗೆ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಮೆಹೆಂದಿ ಕಲಾ ಸ್ಪರ್ಧೆ ನಡೆಯಲಿದೆ. ಸಂಜೆ 4ಗಂಟೆಗೆ `ನೈಸರ್ಗಿಕ ಸಂಪನ್ಮೂಲಗಳ ನಿರ್ವ ಹಣೆ ಮತ್ತು ಕೃಷಿ~ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಜ. 23ರಂದು ಬೆಳಿಗ್ಗೆ 11ಗಂಟೆ ಭಜನಾ ಮೇಳದ ಸಮಾರೋಪ ನಡೆಯಲಿದೆ. ಮಧ್ಯಾಹ್ನ 2ಗಂಟೆಗೆ ಕುಸ್ತಿ ಪಂದ್ಯ, ಸಂಜೆ 4ಕ್ಕೆ ದನಗಳ ಜಾತ್ರೆಯ ಸಮಾರೋಪ ಹಮ್ಮಿಕೊಳ್ಳಲಾಗಿದೆ  ಎಂದು ವಿವರಿಸಿದರು.

ಜ. 24ರಂದು ಬೆಳಿಗ್ಗೆ 11ಗಂಟೆಗೆ ಕೃಷಿ ಮತ್ತು ಸಾಂಸ್ಕೃತಿಕ ಮೇಳದ ಸಮಾರೋಪ ನಡೆಯಲಿದೆ. ಸಂಜೆ 4.30ಗಂಟೆಗೆ ಕ್ರೀಡಾಕೂಟದ ಸಮಾರೋಪ ನಡೆಯಲಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರಗಳಿಂದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ವಿಶೇಷ ಬಸ್ ಸಂಚರಿಸಲಿವೆ. ಜಾತ್ರೆಗೆ ಆಗಮಿಸುವ ಜನರಿಗೆ ದಾಸೋಹ ಭವನ, ವಿದ್ಯಾರ್ಥಿ ನಿಲಯಗಳು, ಅತಿಥಿಗೃಹ, ತಾತ್ಕಾಲಿಕ ಕುಟೀರ ನಿರ್ಮಿಸಿ, ವಸತಿ ಸೌಲಭ್ಯ ಕಲ್ಪಿಸಲಾಗುವುದು. ಶೌಚಾ ಲಯ ಹಾಗೂ ಸ್ನಾನ ಗೃಹ ಕೂಡ ನಿರ್ಮಿಸಲಾಗಿದೆ. ಪ್ರತಿನಿತ್ಯ ಊಟ ಮತ್ತು ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ ಪ್ರಾಂಶುಪಾಲ ಎ.ಜಿ. ಶಿವಕುಮಾರ್, ಡಾ.ಚೌಡಯ್ಯ ಕಟ್ನವಾಡಿ, ಡಾ.ಎಂ.ಬಿ. ಅಶೋಕ್, ಬಿ.ಕೆ. ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.