ADVERTISEMENT

ಕೊಳ್ಳೇಗಾಲ | ಗೂಡ್ಸ್ ಆಟೊ ಪಲ್ಟಿ: 12 ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 7:02 IST
Last Updated 5 ಅಕ್ಟೋಬರ್ 2019, 7:02 IST
   

ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಮತ್ತೀಪುರ ಗ್ರಾಮದ ಬಳಿಯ ಕ್ರಾಸ್‌ನಲ್ಲಿಗೂಡ್ಸ್ ಆಟೊ ಉರುಳಿ ಬಿದ್ದು 12 ಕೂಲಿ ಕಾರ್ಮಿಕ ಮಹಿಳೆಯರು ಗಾಯಗೊಂಡಿದ್ದಾರೆ.

ಐವರ ಪರಿಸ್ಥಿತಿ ಗಂಭೀರವಾಗಿದ್ದು ಮೈಸೂರಿನ ಆಸ್ಪತ್ರೆಗೆ‌ ಕರೆದುಕೊಂಡು ಹೋಗಲಾಗಿದೆ. ಉಳಿದವರಿಗೆ ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದೆ. ದುರ್ಘಟನೆಯಲ್ಲಿ‌ ಮಹಿಳೆಯೊಬ್ಬರ ಬೆರಳುಗಳು ತುಂಡಾಗಿವೆ.

ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಸ್ಥಳಳಕ್ಕೆ ಗ್ರಾಮಾಂತರ ರಾಣಾ ಪಿ.ಎಸ್.ಸಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT
ಉರುಳಿಬಿದ್ದಿರುವ ಆಟೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.