
ಗುಂಡ್ಲುಪೇಟೆ: ಪಟ್ಟಣದ ಕರ್ಣಾಟಕ ಬ್ಯಾಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳವಿಗೆ ವಿಫಲ ಯತ್ನ ನಡೆದಿದೆ.
ಮಂಗವಾರ ಸಂಜೆ ಸುಮಾರಿಗೆ ಪುರಸಭೆ ಮಾಜಿ ಸದಸ್ಯ ಎನ್.ಕುಮಾರ್ ತಮ್ಮ ಹೊಂಡಾ ಆಕ್ಟೀವ್ ಬೈಕ್ ನಿಲ್ಲಿಸಿ ಕ್ರೀಡಾಂಗಣದಲ್ಲಿ ವಾಕಿಂಗ್‌ಗೆ ತೆರಳಿದ್ದ ವೇಳೆ ದುರಸ್ತಿ ನೆಪದಲ್ಲಿ ಕಳ್ಳ ಬೈಕ್ ಬಳಿ ಬಂದು ಸ್ಕ್ರೂ ಡ್ರೈವರ್ ಮೂಲಕ ಬೀಗ ಹಾಕುವ ಜಾಗವನ್ನು ತೆಗೆದು, ವೈರ್ ಕತ್ತರಿಸಲು ಮುಂದಾಗಿದ್ದಾನೆ. ಈ ಸಂದರ್ಭ ಅಕ್ಕಪಕ್ಕದಲ್ಲಿ ಜನರು ಓಡಾಟವಿದ್ದ ಕಾರಣ ಕಳ್ಳತನ ವಿಫಲವಾಗಿದೆ. ನಂತರ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಬೈಕ್ ಮಾಲೀಕರ ದೂರಿನ ಮೇರೆಗೆ ಗುಂಡ್ಲುಪೇಟೆ ಠಾಣೆ ಅಪರಾಧ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಅಪರಾಧ ವಿಭಾಗದ ಪೊಲೀಸರ ವೈಫಲ್ಯ?
‘ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ ಸೇರಿ ವಾರ್ಡ್‍ಗಳಲ್ಲಿ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಪರಾಧ ವಿಭಾಗದ ಪೊಲೀಸರು ಮೌನ ವಹಿಸಿದ್ದಾರೆ. ಕೂಡಲೇ ಕಳ್ಳರ ಬಂಧನಕ್ಕೆ ಮುಂದಾಗಬೇಕು’ ಎಂದು ಪುರಸಭೆ ಮಾಜಿ ಸದಸ್ಯ ಎನ್.ಕುಮಾರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.