ADVERTISEMENT

ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್; ಆಳ್ವಾಸ್‌ ’ಎ’ ತಂಡದ ಮುಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 1:57 IST
Last Updated 21 ಜನವರಿ 2026, 1:57 IST
ಚಾಮರಾಜನಗರದನ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಜೂನಿಯರ್ಸ್ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ‘ಎ’ ತಂಡ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಚಾಮರಾಜನಗರದನ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಜೂನಿಯರ್ಸ್ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ‘ಎ’ ತಂಡ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.   

ಚಾಮರಾಜನಗರ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯವಾದ ರಾಜ್ಯಮಟ್ಟದ ಜೂನಿಯರ್ಸ್ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ‘ಎ’ ತಂಡ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕದ ಸಹಯೋಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಆಳ್ವಾಸ್ ‘ಎ’ ತಂಡವು 35–30, 35–27 ಪಾಯಿಂಟ್‌ಗಳ ನೇರ ಸೆಟ್‌ಗಳಿಂದ ಜಯಗಳಿಸಿತು.

ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ‘ಎ’ ತಂಡವು 35–30, 35–32 ಪಾಯಿಂಟ್‌ಗಳಿಂದ ನೇರ್‌ ಸೆಟ್‌ಗಳಲ್ಲಿ ಗೆಲುವು ಪಡೆಯಿತು. ಎರಡೂ ವಿಭಾಗಗಳಲ್ಲಿ ಆಳ್ವಾಸ್ ‘ಎ’ ತಂಡ ಅತ್ಯುತ್ತಮ ಪ್ರದರ್ಶನ ನೀಡಿತು.

ADVERTISEMENT

ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ‘ಬಿ’ ತಂಡ ರನ್ನರ್ ಅಪ್ ಸ್ಥಾನ ಪಡೆದರೆ, ಬೆಂಗಳೂರಿನ ರಾಜೇಶ್ವರಿ ಯೂಥ್ ಕ್ಲಬ್ ತೃತೀಯ ಸ್ಥಾನ ಪಡೆಯಿತು.

ಬಾಲಕರ ವಿಭಾಗದಲ್ಲಿ ಉತ್ತಮ ಮುಂದಾಳು ಆಟಗಾರನಾಗಿ ಆರ್‌.ಆರ್‌ ನಗರ ತಂಡದ ಶಿವರಾಜು, ಉತ್ತಮ ಮಧ್ಯಭಾಗದ ಆಟಗಾರನಾಗಿ ಚಾಮರಾಜನಗರದ ಪ್ರತಾಪ್‌, ಉತ್ತಮ ಹಿಂಬದಿಯ ಆಟಗಾರನಾಗಿ ಆಳ್ವಾಸ್‌ನ ಯತೀಶ್‌, ಬಾಲಕಿಯರ ವಿಭಾಗದಲ್ಲಿ ಉತ್ತಮ ಮುಂದಾಳು ಆಟಗಾರ್ತಿಯಾಗಿ ಚಿಕ್ಕಮಗಳೂರಿನ ಹೇಮಾ, ಉತ್ತಮ ಸೆಂಟರ್ ಆಟಗಾರ್ತಿಯಾಗಿ ಆರ್.ಆರ್ ನಗರದ ಹರ್ಷಿತಾ, ಉತ್ತಮ ಹಿಂಬದಿಯ ಆಟಗಾರ್ತಿಯಾಗಿ ಆಳ್ವಾಸ್‌ ತಂಡದ ಲಾಂಚನಾ ಪ್ರಶಸ್ತಿ ಪಡೆದುಕೊಂಡರು.

ಭರವಸೆಯ ಗ್ರಾಮೀಣ ಆಟಗಾರ ಪ್ರಶಸ್ತಿ ಚಿತ್ರದುರ್ಗದ ಕೋಮಲ್‌ಗೆ ನೀಡಲಾಯಿತು. ಭವಿಷ್ಯದ ಆಟಗಾರರಾಗಿ ಚಿತ್ರದುರ್ಗದ ಶಿವ, ಹೊನ್ನೂರಿನ ಮಹದೇವ ಪ್ರಸಾದ್, ಮೇಗಲಹುಂಡಿಯ ಸಿದ್ದರಾಜು ಹಾಗೂ ಲಿಂಗರಾಜು, ಆರ್‌.ಆರ್‌.ನಗರದ ಗುರುಮೂರ್ತಿ, ಅಶೋಕ್‌, ಮೂಡಿಗೆರೆ ಸಫಾನ್‌, ವಿನಯ್‌, ಕುಶಾಲ್, ಆರ್.ಎಂ.ದಿವ್ಯಾ, ಶಾಲಿನಿ, ನಂದಿನಿ, ಕವಿತಾ, ಪ್ರೇಮಾ ಪ್ರಶಸ್ತಿ ಪಡೆದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬಾಲ್ ಬ್ಯಾಡ್ಮಿಂಟನ್‌ ಕ್ರೀಡೆ ಗ್ರಾಮೀಣ ಭಾಗಗಳಿಗೂ ವಿಸ್ತರಿಸಿದ್ದು ಹಳ್ಳಿಯ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುತ್ತಿರುವುದು ಸಂತಸದ ವಿಚಾರ.‌ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಹಾಗೂ ವೇದಿಕೆ ದೊರೆತರೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಸಾಧನೆ ಮಾಡಲಿದ್ದಾರೆ ಎಂದರು.

ಕೆನರಾ ಬ್ಯಾಂಕ್‌ ಅಧಿಕಾರಿ ಶಮಿತ್‌, ಉದ್ಯಮಿ ಶ್ರೀನಿಧಿ ಕುದರ್, ಖಜಾಂಚಿ ಮಹದೇವು, ಏಕಲವ್ಯ ಪ್ರಶಸ್ತಿ ಪುರಸ್ಕೃತ ಸುದರ್ಶನ್‌, ನಿವೃತ್ತ ದೈಹಿಕ ಶಿಕ್ಷಕ ಎಂ.ಮಲ್ಲಪ್ಪ, ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ, ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್, ಅಸೋಸಿಯೇಷನ್ ಅಧ್ಯಕ್ಷ ಎಂ.ವಿಮಲ್ ರಾಜ್, ಪ್ರಧಾನ ಕಾರ್ಯದರ್ಶಿ ಡಿ.ಮಲ್ಲೇಶ್, ಗಿರೀಶ್, ಹೇಮಂತ್, ರಾಜೀವ್, ಮಂಜುನಾಥ್ ಹರದನಹಳ್ಳಿ, ಮೈಕಲ್, ವಾರಿಧಿ, ಯಶವಂತ, ಲೋಕೇಶ್, ನವೀನ್, ಮನೋಜ್ ಇದ್ದರು.

ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ‘ಎ’ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಬಾಲ್ ಬ್ಯಾಡ್ಮಿಂಟನ್‌: ಜಿಲ್ಲೆ ಪ್ರಸಿದ್ಧಿ

ಜಿಲ್ಲೆಯು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಪ್ರಸಿದ್ಧಿಯಾಗಿದ್ದು ರಾಜ್ಯ ತಂಡ ಪ್ರತಿನಿಧಿಸಿರುವ ಹಲವು ಆಟಗಾರರು ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯ ಮೂವರಿಗೆ ಏಕಲವ್ಯ ಪ್ರಶಸ್ತಿ ದೊರೆತಿದೆ. ಕಠಿಣ ಪರಿಶ್ರಮ ಶ್ರದ್ಧೆ ಹಾಗೂ ಗುರಿಯೊಂದಿಗೆ ಸಾಗಿದರೆ ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಬಹುದು. ಮೇನಲ್ಲಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್‌ ಪಂದ್ಯಾವಳಿ ಆಯೋಜನೆಯ ಉದ್ದೇಶವಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವಾಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.