ADVERTISEMENT

ಬಂಡೀಪುರ, ಕೆ.ಗುಡಿ ಸಫಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 5:00 IST
Last Updated 4 ಜುಲೈ 2020, 5:00 IST

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಕೋವಿಡ್‌–19 ನಿಯಂತ್ರಿಸುವ ಸಲುವಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೊರಡಿಸಿರುವ ಆದೇಶದಂತೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿರುವ ಸಫಾರಿ ಸ್ಥಗಿತಗೊಂಡಿದೆ.

ಜಂಗಲ್ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ನ ರೆಸಾರ್ಟ್‌ ಹಾಗೂ ಖಾಸಗಿ ರೆಸಾರ್ಟ್‌ ಹಾಗೂ ಹೋಂಸ್ಟೇಗಳನ್ನು ಮುಂದಿನ ಆದೇಶವರೆಗೆ ಬಂದ್‌ ಮಾಡಲಾಗಿದೆ.

ಬಂಡೀಪುರದಲ್ಲಿ ಜೂನ್‌ 8ರಿಂದ ಸಫಾರಿ ಆರಂಭವಾಗಿತ್ತು. ಹಾಗಿದ್ದರೂ ಹೆಚ್ಚಿನ ಪ್ರವಾಸಿಗರು ಬರುತ್ತಿರಲಿಲ್ಲ. ದಿನಕ್ಕೆ 20 ಪ್ರವಾಸಿಗರಷ್ಟೇ ಬರುತ್ತಿದ್ದರು.

ADVERTISEMENT

ಲಾಕ್‌ಡೌನ್‌ ಸಡಿಲಿಕೆ ನಂತರಬಂಡೀಪುರದ ವ್ಯಾಪ್ತಿಯಲ್ಲಿ ಇರುವ ಹೋಂ ಸ್ಟೇಗಳಿಗೆ ದೂರದ ಸ್ಥಳಗಳಿಂದ ಜನರು ಬಂದು ಪಾರ್ಟಿ ಮಾಡುವುದು ಜಾಸ್ತಿಯಾಗಿತ್ತು. ಇದರಿಂದಾಗಿ ಗ್ರಾಮಸ್ಥರಿಗೆ ತೊಂದರೆಯಾಗಿ ಇಲಾಖೆಯವರಿಗೆ ದೂರು ನೀಡಿದ್ದರು.

‘ಕೋವಿಡ್‌–19 ನಿಯಂತ್ರಣಕ್ಕೆ ಬರುವವರೆಗೆಗ್ರಾಮದಲ್ಲಿ ಇರುವ ರೆಸಾರ್ಟ್, ಹೋಂ ಸ್ಟೇ, ಮತ್ತು ಐಷಾರಾಮಿ ಹೋಟೆಲ್‌ಗಳನ್ನು ತೆರೆಯಬಾರದು ಎಂದು ಕಾಡಂಚಿನ ಗ್ರಾಮಸ್ಥರು ಮಾಲೀಕರ ಬಳಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸದಿದ್ದರೆ ರಸ್ತೆ ಬಂದ್ ಮಾಡುವ ನಿರ್ದಾರ ಮಾಡಿದ್ದರು’ ಎಂದು ಮಂಗಲ ಗ್ರಾಮದ ನಂಜುಂಡಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.