ADVERTISEMENT

ಬಂಡೀಪುರ: ನಾಲ್ಕು ಮರಿಗಳ ಜತೆಗೆ ಹುಲಿ ದರ್ಶನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:36 IST
Last Updated 8 ಆಗಸ್ಟ್ 2025, 2:36 IST
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದ ತಾವರಕಟ್ಟೆ ದೇವಸ್ಥಾನದ ಸಮೀಪ ಸಫಾರಿ ವೇಳೆ ನಾಲ್ಕು ಮರಿಗಳ ಜೊತೆ ಹುಲಿ ಕಾಣಿಸಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದ ತಾವರಕಟ್ಟೆ ದೇವಸ್ಥಾನದ ಸಮೀಪ ಸಫಾರಿ ವೇಳೆ ನಾಲ್ಕು ಮರಿಗಳ ಜೊತೆ ಹುಲಿ ಕಾಣಿಸಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ   

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದಲ್ಲಿ ಬುಧವಾರ ಸಫಾರಿಯಲ್ಲಿ ಹುಲಿ ನಾಲ್ಕು ಮರಿಗಳ ಜೊತೆಗೆ ಕಾಣಿಸಿದೆ. ಈ ದೃಶ್ಯವನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಬಂಡೀಪುರದ ತಾವರಕಟ್ಟೆ ದೇವಸ್ಥಾನದ ಸಮೀಪ ಪ್ರವಾಸಿಗರು ಸಫಾರಿಗೆ ತೆರಳಿದ ವೇಳೆ ನಾಲ್ಕು ಮರಿಗಳ ಜೊತೆ ಹುಲಿ ಕಾಣಿಸಿಕೊಂಡಿದ್ದು, ಆಗಾಗ್ಗೆ ಇವುಗಳು ದರ್ಶನ ನೀಡುತ್ತಿರುವುದರಿಂದ ಬಂಡೀಪುರದ ಪ್ರಮುಖ ಆಕರ್ಷಣೆ ಆಗಿದೆ. ಹುಲಿ ಮರಿಗಳು ಗಿಡಗಳ ಪೊದೆಯಿಂದ ಅತ್ತಿತ್ತ ಓಡಾಡಿ ತಾಯಿ ಜೊತೆಗೆ ಚಿನ್ನಾಟವಾಡುತ್ತಿರುವ ದೃಶ್ಯವನ್ನು ಸಫಾರಿಗೆ ಹೋಗಿದ್ದ ಪ್ರವಾಸಿಗರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT