ADVERTISEMENT

ಗುಂಡ್ಲುಪೇಟೆ| ಶಿಕ್ಷಣಕ್ಕೆ ಆದ್ಯತೆ ನೀಡಿ: ಬಿ.ಎಲ್. ಸಂತೋಷ್ ಕರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:42 IST
Last Updated 26 ಜನವರಿ 2026, 6:42 IST
ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡತುಪ್ಪೂರು ಬಳಿ ನಡೆದ ರೇಡಿಯಂಟ್ ಸ್ಕೂಲ್ ಆಫ್ ಎಕ್ಷಲೆನ್ಸ್, ಪಿ.ಯು ಕಾಲೇಜು ಮತ್ತು ಅಕಾಡೆಮಿಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉದ್ಘಾಟಿಸಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಿ.ವಿ.ಸದಾನಂದಗೌಡ, ಚೇರ್ಮನ್‌ಗಳಾದ ಜಿ.ನಿಜಗುಣರಾಜು, ಮಂಜುಳರಾಜ್ ಪ್ರಮುಖರು ಭಾಗವಹಿಸಿದ್ದರು.
ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡತುಪ್ಪೂರು ಬಳಿ ನಡೆದ ರೇಡಿಯಂಟ್ ಸ್ಕೂಲ್ ಆಫ್ ಎಕ್ಷಲೆನ್ಸ್, ಪಿ.ಯು ಕಾಲೇಜು ಮತ್ತು ಅಕಾಡೆಮಿಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉದ್ಘಾಟಿಸಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಿ.ವಿ.ಸದಾನಂದಗೌಡ, ಚೇರ್ಮನ್‌ಗಳಾದ ಜಿ.ನಿಜಗುಣರಾಜು, ಮಂಜುಳರಾಜ್ ಪ್ರಮುಖರು ಭಾಗವಹಿಸಿದ್ದರು.   

ಗುಂಡ್ಲುಪೇಟೆ: ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಲಹೆ ನೀಡಿದರು.

 ದೊಡ್ಡತುಪ್ಪೂರು ಬಳಿ ಜ್ಞಾನ ಸಂಗಮ ಪ್ರತಿಷ್ಠಾನದ ‘ರೇಡಿಯಂಟ್ ಸ್ಕೂಲ್ ಆಫ್ ಎಕ್ಷಲೆನ್ಸ್, ಪಿಯು ಕಾಲೇಜು ಮತ್ತು ಅಕಾಡೆಮಿ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿಯಲ್ಲಿ ವಿದ್ಯೆ ಮತ್ತು ಸಮರ್ಪಣೆಗೆ ವಿಶೇಷ ಮಹತ್ವ ಇದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ವಿದ್ಯೆ ಕಲಿಸಿದ ಗುರುವನ್ನು ಮರೆಯುವುದಿಲ್ಲ.  ಸಮಾಜಕ್ಕಾಗಿ ಸಮರ್ಪಿಸಿಕೊಂಡವರಿಗೆ ಗೌರವ ಸಲ್ಲುತ್ತವೆ’ ಎಂದರು.

ADVERTISEMENT

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ‘ಅಭಿವೃದ್ಧಿ ವಿಷಯದಲ್ಲಿ ಮಾನವ ಶಕ್ತಿ ದೊಡ್ಡದು, ಇದು ದೇಶಕ್ಕೆ ಹೊಸ ದಿಕ್ಕನ್ನು  ಕೊಟ್ಟಿದೆ; ಈಗ ಮೇಡ್ ಇನ್ ಇಂಡಿಯಾ ಆಗಿದೆ. ಚಂದ್ರನ ಮೇಲೆ ಪಾದಾರ್ಪಣೆ, ಕೃಷಿ ಕ್ಷೇತ್ರದ ಸಾಧನೆ, ಹೈನುಗಾರಿಕೆ ಎಲ್ಲದಕ್ಕೂ ಮೂಲ ಕಾರಣ ಶಿಕ್ಷಣ. ಗುಣಮಟ್ಟದ ಶಿಕ್ಷಣದ ಕಡೆಗೆ ಗಮನ ಕೊಡಬೇಕು’ ಎಂದು ತಿಳಿಸಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ,  ಜ್ಞಾನ ಸಂಗಮ ಹೆಸರಿಗೆ ತಕ್ಕಂತೆ ಮೂರು ಸಂಸ್ಥೆಗಳ ಸಮ್ಮಿಲನವಾಗಿದೆ. ತಂದೆ ತಾಯಿ ಅಪೇಕ್ಷೆ ಪಡುವಂತ ಉತ್ತಮ ಶಿಕ್ಷಣ ಕೊಡುವ ಸಂಸ್ಥೆ ಮನೆ ಬಾಗಿಲಲ್ಲೇ ಆರಂಭವಾಗಿರುವುದು ಉತ್ತಮ ವಿಚಾರ ಎಂದರು.

ಸಂಸ್ಥೆಯ ಚೇರ್ಮನ್ ಜಿ.ನಿಜಗುಣರಾಜು ಮಾತನಾಡಿ, ಉದ್ಯಮಿಯಾಗಿ ಲಾಭ ಬರುವ ಬಂಡವಾಳ ತೊಡಗಿಸದೆ ಶಿಕ್ಷಣ ಸಂಸ್ಥೆ ತೆರೆಯಲು ತಂದೆಯವರ ಆಶಯವೇ ಕಾರಣ. ಬೆಂಗಳೂರು ಮತ್ತು ಮಂಗಳೂರಿನ ಸಂಸ್ಥೆಗಳ ಗುಣಮಟ್ಟದಲ್ಲಿ ಸೌಲಭ್ಯ, ಮಕ್ಕಳ ಓದಿಗೆ ಜಿಲ್ಲೆಯ ಪೋಷಕರು ಸಾಧಾರಣ ಹಣ ವ್ಯಯಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಸಿದ್ದಗಂಗಾ ಶಿವಕುಮಾರ  ಸ್ವಾಮೀಜಿ ಮತ್ತು ರಾಜೇಂದ್ರ ಶ್ರೀಗಳ ಶಿಕ್ಷಣ ಕ್ರಾಂತಿಯನ್ನು ಸ್ಮರಿಸಿದರು.

 ಗಾಯಕಿ ಸಂಗೀತಾ ಕಟ್ಟಿ ಅವರಿಂದ ವಚನ ಮತ್ತು ಭಾವಗೀತೆಗಳ ಗಾಯನ ನಡೆಯಿತು. ಸಿದ್ದಗಂಗಾ ಸಿದ್ದಲಿಂಗ  ಸ್ವಾಮೀಜಿ, ಕನಕಗಿರಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕರಾದ ಎಚ್.ಎಂ.ಗಣೇಶಪ್ರಸಾದ್, ಎಚ್.ಕೆ.ಸುರೇಶ್, ಶ್ರೀವತ್ಸ, ಮಾಜಿ ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್, ಬೆಳ್ಳಿಪ್ರಕಾಶ್, ಮಾಜಿ ಸಚಿವ ಎನ್.ಮಹೇಶ್, ಶರಣ ಸಾಹಿತ್ಯ ಪರಿಷತ್ತು ರಾಜ್ಯ  ಸಮಿತಿ ಅಧ್ಯಕ್ಷ ಸಿ.ಸೋಮಶೇಖರ್, ಸಂಸ್ಥೆಯ ಚೇರ್ಮನ್ ಮಂಜುಳರಾಜ್, ಕಾರ್ಯದರ್ಶಿ ಡಿ.ಶ್ವೇತಾ  ಭಾಗವಹಿಸಿದ್ದರು.