ADVERTISEMENT

ಬಿಳಿಗಿರಿರಂಗನಬೆಟ್ಟ: ಸೆಲ್ಫಿ ಪ್ರಿಯರಿಗೆ ₹2 ಸಾವಿರ ದಂಡ

ಅರಣ್ಯ ಇಲಾಖೆ ಕ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:40 IST
Last Updated 30 ಜುಲೈ 2023, 14:40 IST
ಭಾನುವಾರ ರಸ್ತೆ ಬದಿ ಕುಳಿತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ವಾಹನ ಸವಾರರು.
ಭಾನುವಾರ ರಸ್ತೆ ಬದಿ ಕುಳಿತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ವಾಹನ ಸವಾರರು.   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೇವಾಲಯ ಕಮರಿಯಲ್ಲಿ ಭಾನುವಾರ ಭಕ್ತರು ಬಂಡೆ ಏರಿ ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. ದ್ವಿಚಕ್ರ ವಾಹನ ಸವಾರರು ಕೆರೆಯ ಬಳಿ ಬೈಕ್ ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ದೃಶ್ಯ ಸಾಮಾನ್ಯವಾಗಿತ್ತು.

ಈಚಿನ ದಿನಗಳಲ್ಲಿ ಬನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿಗರು ಮತ್ತು ಭಕ್ತರು ಬಸ್, ಕಾರು ಮತ್ತು ದ್ವಿಚಕ್ರ ವಾಹನಗಳ ಮೂಲಕ ಸಂಚರಿಸುತ್ತಾರೆ. ಕೆಲ ವಾಹನ ಸವಾರರು ರಸ್ತೆ ಸಮೀಪದ ಕೆರೆ, ಹಸಿರು ತುಂಬಿದ ಪ್ರದೇಶಗಳಲ್ಲಿ ಕುಳಿತು ಫೋಟೋಗೆ ಪೋಸು ನೀಡುವ ಗೀಳು ಹೆಚ್ಚಾಗುತ್ತಿದೆ.

ರಸ್ತೆ ಬದಿ ಬಿಸಿಲಿಗೆ ವನ್ಯಜೀವಿಗಳು ಅಡ್ಡಾಡುತ್ತವೆ. ಕೆರೆ, ಕಟ್ಟೆ, ನೀರಿನ ಝರಿಗಳ ಬಳಿ ಪ್ರಾಣಿಗಳ ಸಂಚಾರ ಹೆಚ್ಚು. ಎಲ್ಲೆಂದರಲ್ಲಿ ಕುಳಿತು ಚಿತ್ರ ತೆಗೆಯುವ ವಾಹನ ಸವಾರರು ಕಂಡುಬಂದರೆ ಅರಣ್ಯ ರಕ್ಷಕರು ಕೇಸು ದಾಖಲಿಸುತ್ತಾರೆ ಎಂದು ಅರಣ್ಯ ಅಧಿಕಾರಿಗಳು ಹೇಳಿದರು.

ADVERTISEMENT

ಬಂಡೆ ಜಾರುತ್ತದೆ, ಅಲ್ಲಿ ಏರಬಾರದು, ಫೋಟೊ ತೆಗೆಯಬಾರದು. ತುಂತುರು ಹನಿ ಕಲ್ಲಿನ ಮೇಲೆ ಸಂಗ್ರಹವಾಗಿದ್ದು, ಪಾಚಿ ಕಟ್ಟುತ್ತದೆ. ಇದರ ಮೇಲೆ ಏರಿದರೆ ಅಪಾಯ ಎದುರಾಗುತ್ತದೆ. ಈ ಬಗ್ಗೆ ಎಚ್ಚರಿಕೆ ಫಲಕ ಇದ್ದರೂ, ಪ್ರವಾಸಿಗರು ನಿರ್ಲಕ್ಷಿಸುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎನ್ನುತ್ತಾರೆ ದೇವಾಲಯ ಇಒ ವೈ.ಎನ್.ಮೋಹನ್ ಕುಮಾರ್.

ಸೆಲ್ಫಿ ಸವಾರಿಗೆ ₹2 ಸಾವಿರ ದಂಡ

‘ಕಾಡಿನ ಮಧ್ಯೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ, ಕೆರೆಬದಿ ಕುಳಿತು ಸೆಲ್ಫಿ ತೆಗೆದುಕೊಂಡ 4 ವಾಹನ ಸವಾರರಿಗೆ ₹2 ಸಾವಿರ ದಂಡ ವಿಧಿಸಲಾಗಿದೆ’ ಎಂದು ಎಆರ್‌‌‌ಎಫ್ಒ ರಮೇಶ್ ಹೇಳಿದರು.

ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ದೇವಳದ ಕಮರಿ ಬಂಡೆ ಏರಿರುವ ಭಕ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.