ಚಾಮರಾಜನಗರ: ‘ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಗೌತಮ ಬುದ್ದರೇ ವೈದ್ಯರಾಗಿದ್ದು, ಇಡೀ ಜಗತ್ತೇ ಈಗ ಬುದ್ದನತ್ತ ಮುಖ ಮಾಡಿದೆ’ ಎಂದು ಕೊಳ್ಳೇಗಾಲ ಜೇತವನ ಭೌದ್ದ ವಿಹಾರದ ಮನೋರಖ್ಖಿತ ಬಂತೇಜಿ ಗುರುವಾರ ಹೇಳಿದರು.
ನಗರದ ಸಾರನಾಥ ಭೌದ್ದ ವಿಹಾರದಲ್ಲಿ ಭಾರತೀಯ ಭೌದ್ದ ಮಹಾಸಭಾ ತಾಲ್ಲೂಕು ವಿಭಾಗ ಅಯೋಜಿಸಿದ ವೈಶಾಖ ಬುದ್ದ ಪೂರ್ಣಿಮೆ 2568ನೇ ಬುದ್ದ ಜಯಂತಿ ಕಾರ್ಯಕ್ರಮದಲ್ಲಿ ಪಠಣ ಮತ್ತು ಉಪದೇಶ ಹಾಗೂ ದೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟು, ಸಾಮೂಹಿಕ ಬುದ್ದವಂದನೆ ಸಲ್ಲಿಸಿ ಅವರು ಮಾತನಾಡಿದರು.
‘ವೈಶಾಖ ಬುದ್ದ ಪೂರ್ಣಿಮೆಯನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಏಷ್ಯಾ ಖಂಡದ ಬೌದ್ಧ ರಾಷ್ಟ್ರಗಳು, ಯುರೋಪ್, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬುದ್ದ ಪೂರ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ’ ಎಂದರು.
‘ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ದ ಧಮ್ಮಾ ಸ್ವೀಕರಿಸಿದ ಮೇಲೆ ಭಾರತದಲ್ಲಿ ಧಮ್ಮಾ ಕ್ರಾಂತಿ ಉಂಟು ಮಾಡಿದೆ. ರಾಜ್ಯದ 127 ಬೌದ್ದ ವಿಹಾರಗಳು ಹಾಗೂ ಅನೇಕ ಸಂಘಟನೆಗಳು ಬುದ್ದ ಜಯಂತಿ ಆಚರಿಸುತ್ತಾರೆ. ಗೌತಮ ಬುದ್ದರು ಪ್ರೀತಿ, ಕರುಣೆ, ಮೈತ್ರಿ ಬೋಧಿಸಿ ಜಗತ್ತಿಗೇ ಮಾದರಿ ಆಗಿದ್ದಾರೆ’ ಎಂದು ಬಂತೇಜಿ ಹೇಳಿದರು.
ಭಾರತೀಯ ಭೌದ್ದ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಂ.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಪ್ರಸನ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿದರು.
ಭಾರತೀಯ ಬೌದ್ದ ಮಹಾಸಭಾ ಜಿಲ್ಲಾ ಖಜಾಂಚಿ ಡಿ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಸಂಸ್ಕಾರ ವಿಭಾಗದ ಉಪಾಧ್ಯಕ್ಷ ಪುಟ್ಟಸ್ವಾಮಿ, ಪ್ರವಾಸ ಮತ್ತು ಪ್ರಚಾರ ಸಮಿತಿ ಉಪಾಧ್ಯಕ್ಷ ಉಮೇಶ್ ಕುದರ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗಶಿಲ್ಪ, ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಎ.ಶಿವಣ್ಣ, ಸಿದ್ದಾರ್ಥ ಪರಿಶಿಷ್ಠ ಜಾತಿ ಸರ್ಕಾರಿ ನೌಕರರ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಸಿದ್ದರಾಜು, ರಮಾಬಾಯಿ ಸಂಘ ಅಧ್ಯಕ್ಷ ಪುಷ್ಪಮರಿಸ್ವಾಮಿ, ಬುದ್ದನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಹದೇವಯ್ಯ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.