ಚಾಮರಾಜನಗರ: ನಗರದ ಸೇಂಟ್ ಫ್ರಾನ್ಸಿಸ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ (9) ಹೃದಯಸ್ತಂಭನದಿಂದ ಸೋಮವಾರ ಮೃತಪಟ್ಟಳು.
ಬೆಳಿಗ್ಗೆ ಲವಲವಿಕೆಯಿಂದಲೇ ಶಾಲೆಗೆ ಹಾಜರಾಗಿದ್ದ ಬಾಲಕಿಯು, ಇನ್ನೊಂದು ತರಗತಿಗೆ ಹೋಗುವಾಗ ಏಕಾಏಕಿ ಕುಸಿದುಬಿದ್ದಳು. ಶಿಕ್ಷಕರು ಸಮೀಪದ ಜೆಎಸ್‌ಎಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಳು. ‘ಸಾವಿಗೆ ಹೃದಯಸ್ತಂಭನ ಕಾರಣ’ ಎಂದು ವೈದ್ಯರು ತಿಳಿಸಿದ್ದಾರೆ.
ಆಕೆ ತಾಲ್ಲೂಕಿನ ಬದನಗುಪ್ಪೆಯ ಲಿಂಗರಾಜು– ಶೃತಿ ದಂಪತಿ ಪುತ್ರಿ. ಅಂತ್ಯಕ್ರಿಯೆ ಜ.7ರಂದು ಬದನೆಗುಪ್ಪೆಯಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.