ADVERTISEMENT

ಚಾಮರಾಜನಗರ | ಹಣ ದ್ವಿಗುಣ ವಂಚನೆ: ಪಿಎಸ್‌ಐ ಸೇರಿ ನಾಲ್ವರ ಅಮಾನತು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 18:32 IST
Last Updated 29 ಜುಲೈ 2025, 18:32 IST
<div class="paragraphs"><p>ಅಮಾನತು</p></div>

ಅಮಾನತು

   

ಚಾಮರಾಜನಗರ: ತಮಿಳುನಾಡು ಮೂಲದ ವ್ಯಕ್ತಿಯೊಬ್ಬರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಆರೋಪ ಪ್ರಕರಣದಲ್ಲಿ ಪಿಎಸ್‌ಐ ಹಾಗೂ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಚಾಮರಾಜನಗರ ಠಾಣೆ ಪಿಎಸ್‌ಐ ಅಯ್ಯನಗೌಡ, ಹೆಡ್‌ ಕಾನ್‌ಸ್ಟೆಬಲ್‌ ಬಸವಣ್ಣ, ಕಾನ್‌ಸ್ಟೆಬಲ್‌ಗಳಾದ ಮೋಹನ್, ಮಹೇಶ್ ಅಮಾನತುಗೊಂಡವರು. ನಾಲ್ವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆದಿದೆ. ಇತರೆ ಆರೋಪಿಗಳಾದ ಫೈರೋಜ್, ಇಮ್ರಾನ್, ಅಶ್ರಫ್ ಅವರನ್ನು ಬಂಧಿಸಲಾಗಿದೆ.

ADVERTISEMENT

ವಿವರ: ಆರೋಪಿಗಳು ಈಚೆಗೆ ತಮಿಳುನಾಡಿನ ಉದ್ಯಮಿ ಸಚ್ಚಿದಾನಂದ ಅವರಿಗೆ ಹಣ ದ್ವಿಗುಣ ಆಮಿಷವೊಡ್ಡಿ ಲಾಡ್ಜ್‌ಗೆ ಕರೆಸಿಕೊಂಡು ₹ 3.70 ಲಕ್ಷ ಪಡೆದು ಪರಾರಿಯಾಗಿದ್ದರು. ಇವರಿಗೆ ಪೊಲೀಸರು ಸಹಕರಿಸಿದ್ದರು. ಉದ್ಯಮಿ ಈ ಬಗ್ಗೆ ದೂರು ನೀಡಿದ್ದರು ಎಂದು ಎಸ್‌ಪಿ ಬಿ.ಟಿ.ಕವಿತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.