
ಪ್ರಜಾವಾಣಿ ವಾರ್ತೆ
ಚಾಮರಾಜನಗರ: ತಾಲ್ಲೂಕಿನ ನಂಜೇದೇವನಪುರ ಬಳಿ ಮಂಗಳವಾರ ಮತ್ತೊಂದು ಹುಲಿ ಮರಿ ಸೆರೆ ಸಿಕ್ಕಿದೆ. ತಾಯಿಯಿಂದ ಬೇರ್ಪಟ್ಟಿದ್ದ ಮರಿಗಳ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು.
‘ನಾಲ್ಕು ಮರಿಗಳು ಬೇರ್ಪಟ್ಟಿದ್ದು, ಡಿ.15, 17ರಂದು ಎರಡು ಮರಿಗಳು ಸೆರೆ ಸಿಕ್ಕಿದ್ದವು. ಉಳಿದ ಇನ್ನೊಂದು ಮರಿಗೆ ಶೋಧ ನಡೆದಿದೆ. ಸಿಕ್ಕಿರುವ ಮೂರು ಹುಲಿ ಮರಿಗಳ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.