ADVERTISEMENT

ಚಾಮರಾಜನಗರ | ಬದುಕಿನ ಸಾಕ್ಷಾತ್ಕಾರಕ್ಕೆ ಭಗವದ್ಗೀತೆ ಅಗತ್ಯ: ದಾನೇಶ್ವರಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:41 IST
Last Updated 1 ಡಿಸೆಂಬರ್ 2025, 5:41 IST
ಚಾಮರಾಜನಗರದ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಗೀತಾ ಜಯಂತಿ ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ.ದಾನೇಶ್ವರಿ ಉದ್ಘಾಟಿಸಿದರು
ಚಾಮರಾಜನಗರದ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಗೀತಾ ಜಯಂತಿ ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ.ದಾನೇಶ್ವರಿ ಉದ್ಘಾಟಿಸಿದರು   

ಚಾಮರಾಜನಗರ: ಭಗವದ್ಗೀತೆ ಮಾನವನ ಬದುಕಿನ ಮೌಲ್ಯವನ್ನು ಸಾಕ್ಷಾತ್ಕಾರಗಳಿಸಿಕೊಳ್ಳಲು ಇರುವ ಅಮೂಲ್ಯವಾದ ಗ್ರಂಥ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಬಿ.ಕೆ.ದಾನೇಶ್ವರಿ ಹೇಳಿದರು.

ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ‘ಭಾರತೀಯ ಸನಾತನ ಧರ್ಮದಲ್ಲಿ ಶ್ರೇಷ್ಠ ಗ್ರಂಥವಾಗಿರುವ ಭಗವದ್ಗೀತೆಯಲ್ಲಿ ಜೀವನದ ಸಾರ ಅಡಗಿದೆ.

ಡಿ.1ರಂದು ಭಗವದ್ಗೀತೆಯ ದಿನ ಆಚರಿಸಲಾಗುತ್ತಿದೆ. ಶ್ರೀಕೃಷ್ಣನ ವಾಣಿಯಾಗಿರುವ ಭಗವದ್ಗೀತೆಯು ಬದುಕಿನ ಮೌಲ್ಯವನ್ನು ಉನ್ನತಿಗೊಳಿಸಿ ಶ್ರೇಷ್ಠ ಸಾಧಕರಾಗಿ ಬದುಕಲು ನೆರವಾಗುತ್ತದೆ. ಭಗವದ್ಗೀತೆಯ ನಿತ್ಯ ಪಠಣದಿಂದ ಸಮಸ್ಯೆಗಳು ದೂರವಾಗುತ್ತದೆ. ಮನಸ್ಸು ಶಕ್ತಿಯುತವಾಗಿ ಚೈತನ್ಯ ತುಂಬುತ್ತದೆ. ಭಗವದ್ಗೀತೆ ಮನೋಬಲದ ಶ್ರೇಷ್ಠ ಗ್ರಂಥ ಎಂದು ತಿಳಿಸಿದರು.

ADVERTISEMENT

ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ ‘ಭಗವದ್ಗೀತೆ ಮಾನವ ಕುಲದ ಶ್ರೇಷ್ಠ ಗ್ರಂಥವಾಗಿದ್ದು ಜಾತಿ–ಮತ ಭೇದವಿಲ್ಲದೆ ಅಧ್ಯಯನ ಮಾಡಬೇಕು. ಮಾನವ ಜನಾಂಗದ ಕಲ್ಯಾಣಕ್ಕೆ ಇರುವ ಗ್ರಂಥವಾಗಿರುವ ಭಗವದ್ಗೀತೆಯ ಸಾರವು ಸಮಗ್ರ ಮನಃಶಾಸ್ತ್ರದ ಗ್ರಂಥವಾಗಿದೆ. ಮನಸ್ಸಿನ ದುರ್ಬಲತೆ ಕಳೆದು ಸದೃಢತೆಗೆ ಭಗವದ್ಗೀತೆಯ ಪಠಣ ಅಗತ್ಯ. ಭಗವದ್ಗೀತೆಯ ಸಾರ ಅರಿತರೆ ಮನಸ್ಸು ಗಟ್ಟಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ಆರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮಾ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನಾಗರಾಜು, ಶ್ರಾವ್ಯಾ ಋಗ್ವೇದಿ, ಆಶಾ, ಪೂಜಾ, ವಿಜಯ, ಸುಂದರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.