ADVERTISEMENT

ಚಾಮರಾಜನಗರ| ಗಣ ರಾಜ್ಯೋತ್ಸವ ನಿಮಿತ್ತ ಮರಳಲ್ಲಿ ಅರಳಿದ ಸಾಲುಮರದ ತಿಮ್ಮಕ್ಕ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:41 IST
Last Updated 26 ಜನವರಿ 2026, 6:41 IST
ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ ಭವನದ ಆವರಣದಲ್ಲಿ ಮೈಸೂರಿನ ಕಲಾವಿದೆ ಗೌರಿ ಮರಳಿನಲ್ಲಿ ಸಾಲುಮರದ ತಿಮ್ಮಕ್ಕ ಅವರ ಕಲಾಕೃತಿ ರಚಿಸಿರುವುದು
ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ ಭವನದ ಆವರಣದಲ್ಲಿ ಮೈಸೂರಿನ ಕಲಾವಿದೆ ಗೌರಿ ಮರಳಿನಲ್ಲಿ ಸಾಲುಮರದ ತಿಮ್ಮಕ್ಕ ಅವರ ಕಲಾಕೃತಿ ರಚಿಸಿರುವುದು   

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಜ.26 ರಿಂದ 28ರವರೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು ಭಾನುವಾರ ಅಂತಿಮ ಹಂತದ ತಯಾರಿಗಳು ನಡೆದವು.‌

ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ಭಾಗಗಳ ಕುಶಲಕರ್ಮಿಗಳು ತಯಾರಿಸಿರುವ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಗ್ರಾಮೀಣ ಕುಶಲಕರ್ಮಿಗಳಿಗೆ ವೇದಿಕೆ ಕಲ್ಪಿಸಲು ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಲು, ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಮಾಹಿತಿಯನ್ನು ತಿಳಿಸಲು, ಪ್ರಕೃತಿ ಸೌಂದರ್ಯ, ಕಲೆ ಹಾಗೂ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು ಫಲಪುಷ್ಪ ಪ್ರದರ್ಶನದ ಉದ್ದೇಶವಾಗಿದೆ.

ಹೂವಿನಿಂದ ಅಲಂಕೃತಗೊಂಡಿರುವ ಇಂಡಿಯಾ ಗೇಟ್, ಆನೆಗಳ ಮಾದರಿ, ಸಿರಿಧಾನ್ಯಗಳಿಂದ ತಯಾರಿಸುವ ಕಲಾಕೃತಿ, ಸೆಲ್ಫಿ ಪಾಯಿಂಟ್‌, ಸಾಲುಮರದ ತಿಮ್ಮಕ್ಕನವರ ಮರಳು ಕಲಾಕೃತಿ, ತರಕಾರಿಗಳಿಂದ ತಯಾರಿಸಿದ ಕಲಾಕೃತಿಗಳು, ವರ್ಟಿಕಲ್ ಗಾರ್ಡನ್ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

ADVERTISEMENT

ಹಣ್ಣು, ತರಕಾರಿ, ಹೂಗಳಿಂದ ತಯಾರಿಸಿರುವ 5,000 ಹೂವಿನ ಕುಂಡಗಳನ್ನು ಸಿದ್ಧಪಡಿಸಲಾಗಿದೆ. ವೈಜ್ಞಾನಿಕ ಬೇಸಾಯದ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ, ತಾಂತ್ರಿಕ ಸಲಹಾ ಕೇಂದ್ರ, ಮಾರಾಟ ಕೇಂದ್ರಗಳು, ನರ್ಸರಿ ಕೇಂದ್ರ, ಕೃಷಿ, ತೋಟಗಾರಿಕೆ ಇಲಾಖೆಯ ಯಂತ್ರೋಪಕರಣ, ಬ್ಯಾಂಕ್, ಕೃಷಿ ವಿಜ್ಞಾನ ಕೇಂದ್ರ, ಉತ್ಕೃಷ್ಟ ಕೇಂದ್ರಗಳು ರೈತರಿಗೆ ಉಪಯುಕ್ತ ಮಾಹಿತಿ ನೀಡಲಿವೆ.

ಅಣಬೆ ಬೇಸಾಯ, ಜೇನುಕೃಷಿ, ಸಮಗ್ರ, ಸಾವಯವ ಬೇಸಾಯ ಪದ್ಧತಿ, ಪರಿಕರ, ಹಣ್ಣು ಹಾಗೂ ಅಲಂಕಾರಿಕ ಗಿಡಗಳ ಮಾರಾಟ ಮಳಿಗೆಗಳು ಪ್ರದರ್ಶನದಲ್ಲಿ ಇರಲಿದೆ. ಸರ್ಕಾರದ ವಿವಿಧ ಯೋಜನೆಗಳು ಹಾಗೂ ತಾಂತ್ರಿಕತೆಯ ಮಳಿಗೆಗಳು, ಕೃಷಿ, ಮೀನುಗಾರಿಕೆ, ಪಶುಪಾಲನೆ, ರೇಷ್ಮೆ, ಎನ್.ಎಲ್.ಆರ್.ಎಂ, ನರೇಗಾ ಸಹಿತ ವಿವಿಧ ಯೋಜನೆಗಳ ಕುರಿತು ಮಾದರಿಗಳು ಪ್ರದರ್ಶನದಲ್ಲಿ ಇರಲಿವೆ.

ಗಣರಾಜ್ಯೋತ್ಸವ ಪ್ರಯುಕ್ತ ಚಾಮರಾಜನಗರದ ಜಿಲ್ಲಾಡಳಿತ ಭವನಕ್ಕೆ ವಿದ್ಯುತ್ ದೀಪಗಳಿಂದ ಸಿಂಗರಿಸಿರುವ ದೃಶ್ಯ
ಸಾವಯವ ಕೃಷಿ ವೈಜ್ಞಾನಿಕ ಬೇಸಾಯ ಪದ್ಧತಿ ಎರೆಹುಳು ಗೊಬ್ಬರ ತಯಾರಿಕೆ ಸೇರಿದಂತೆ ಆಧುನಿಕ ಕೃಷಿ ಪದ್ಧತಿಯ ಕುರಿತು ತಯಾರಿಸಿರುವ ಮಾದರಿ