
ಚಾಮರಾಜನಗರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ದ ದೇಶಕ್ಕಾಗಿ ಹೋರಾಡಿ ಪ್ರಾಣ ಅರ್ಪಿಸಿದವರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನೆಗೂ ಜೀವ ಸವೆಸಿದ್ದಾರೆ. ದೇಶ ಹಾಗೂ ಪಕ್ಷಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಿ ಗೌರವಿಸುವುದು ಪಕ್ಷದ ಕರ್ತವ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 141ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಶಾಸಕರು, ಕಾರ್ಯಕರ್ತರು, ಮುಖಂಡರು ಪಕ್ಷ ಸಂಘಟನೆಗೆ ಮತ್ತಷ್ಟು ಶ್ರಮ ವಹಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಇತಿಹಾಸ ಹೊಂದಿರುವ ಪಕ್ಷವಾಗಿದ್ದು ದೇಶದ ಅಭಿವೃದ್ಧಿಗೆ ಅಮೂಲ್ಯ ಕಾಣಿಕೆ ನೀಡಿದೆ. ಪಕ್ಷದಿಂದ ಪ್ರಧಾನಿಗಳಾದವರು ದೇಶದ ಪ್ರಗತಿಗೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಹಸಿರು ಕ್ರಾಂತಿ, ಪಂಚವಾರ್ಷಿಕ ಯೋಜನೆ, ಆಹಾರ ಭದ್ರತೆ, ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತೆಯಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಶೋಷಿತರ ಪರವಾಗಿ ಪಕ್ಷ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವುದ ಜೊತೆಗೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ ಎಂದು ಮರಿಸ್ವಾಮಿ ಹೇಳಿದರು.
ಇದೇವೇಳೆ ಪಕ್ಷದ ಹಿರಿಯ ಮುಖಂಡರಾದ ಶತಾಯುಷಿ ಬಿಸಲವಾಡಿ ಚನ್ನಬಸಪ್ಪ, ಕೆ.ಕೆ.ಹುಂಡಿ ದೊಡ್ಡೇಗೌಡ, ರಾಚಯ್ಯ ಚಿಕ್ಕಕೆಂಪಿಹುಂಡಿ, ರಂಗಸ್ವಾಮಿ ವೆಂಕಟಯ್ಯನಛತ್ರ, ಅನ್ವರ್‌ಪಾಷ ಹೆಬ್ಬಸೂರು, ಹೊನ್ನಯ್ಯ ಅವರನ್ನು ಸನ್ಮಾನಿಸಿಲಾಯಿತು.
ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆರ್.ನಾಗರತ್ನ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್.ಮಹದೇವ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಮುಖಂಡರಾದ ಸ್ವಾಮಿ, ಶ್ರೀನಿವಾಸ್, ಚಿನ್ನಮ್ಮ, ಕಲಾವತಿ, ಶಕುಂತಲಾ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂಧನ್, ಬಿಸಲವಾಡಿ ರವಿ, ಕಾಗಲವಾಡಿ ಚಂದ್ರು, ಶಿವಣ್ಣ, ನಾಗಯ್ಯ ನಾಗವಳ್ಳಿ, ನಸ್ರುಲ್ಲಾಖಾನ್, ಸಿದ್ದರಾಜು, ಅಕ್ಷಯ್, ಜಿ.ಡಿ.ಪ್ರಕಾಶ್, ರಾಮಸಮುದ್ರ ಶಿವಕುಮಾರ್, ಶಿವಮೂರ್ತಿ, ಚನ್ನಬಸವಯ್ಯ, ಆಯುಬ್‌ಖಾನ್, ಇಬ್ರಾನ್ ಅಹಮದ್, ಸುಹೇಲ್ ಅಲಿಖಾನ್, ಮಹದೇವಸ್ವಾಮಿ, ಹೆಗ್ಗವಾಡಿ ಕೆಂಪರಾಜು, ಶೇಷಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.