ADVERTISEMENT

ಹನೂರು: ಕೋವಿಡ್‌ಗೆ ಹನೂರು ಪ.ಪಂ. ಸದಸ್ಯ ಸಾವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 2:08 IST
Last Updated 22 ಸೆಪ್ಟೆಂಬರ್ 2020, 2:08 IST
ನಾಗರಾಜು
ನಾಗರಾಜು   

ಹನೂರು: ಪಟ್ಟಣದ ಬನ್ನಿಮಂಟಪದ ನಿವಾಸಿ ಪಟ್ಟಣ ಪಂಚಾಯಿತಿ ವಾರ್ಡ್‌ ನಂ. 2ರ ಸದಸ್ಯ ನಾಗರಾಜು (54) ಅವರು ಸೋಮವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಇವರು ಹಲವು ತಿಂಗಳಿನಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ವಾರದ ಹಿಂದೆ ಜ್ವರ ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ ವೇಳೆ ಪರೀಕ್ಷಿಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ.

ಅಂತ್ಯಕ್ರಿಯೆ ಸರ್ಕಾರದ ನಿಯಮದಂತೆ ಪಟ್ಟಣದ ಹೊರವಲಯದ ಅವರ ಜಮೀನಿನಲ್ಲಿ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.