ADVERTISEMENT

ಚಾಮರಾಜನಗರ: 75ನೇ ಎನ್‌ಸಿಸಿ ದಿನಾಚರಣೆ, ಸೈಕಲ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:28 IST
Last Updated 27 ನವೆಂಬರ್ 2022, 2:28 IST
ಸೈಕಲ್‌ ರ‍್ಯಾಲಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಚಾಲನೆ ನೀಡಿದರು
ಸೈಕಲ್‌ ರ‍್ಯಾಲಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಚಾಲನೆ ನೀಡಿದರು   

ಚಾಮರಾಜನಗರ: 75ನೇ ಎನ್‌ಸಿಸಿ ದಿನಾಚರಣೆ, ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಯಡಬೆಟ್ಗದಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶನಿವಾರ ಬೆಳಿಗ್ಗೆ ಎನ್‌ಸಿಸಿಯ 13 ಕೆಎಆರ್‌ ಬೆಟಾಲಿಯನ್‌, ಸಿಮ್ಸ್‌ ಎನ್‌ಸಿಸಿ ವಿಭಾಗದಿಂದ ಶನಿವಾರ ಸೈಕಲ್‌ ರ‍್ಯಾಲಿ ನಡೆಯಿತು.

30ಕ್ಕೂ ಹೆಚ್ಚಿನ ಸಿಬ್ಬಂದಿ, ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಇತರೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಪೂರ್ಣಿಮಾ ಅವರು ಎನ್‌ಸಿಸಿ ಬಾವುಟವನ್ನು ತೋರಿಸುವುದರ ಮೂಲಕ ಸೈಕಲ್‌ ಜಾಥಾಗೆ ಚಾಲನೆ ನೀಡಿದರು.

ADVERTISEMENT

ನಂತರ ಮಾತನಾಡಿದ ಅವರು, ‘ಎಲ್ಲ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಚುನಾವಣಾ ಆಯೋಗದ ವೋಟರ್ ಹೆಲ್ಪ್‌ಲೈನ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಮತದಾರರ ಚೀಟಿ ‌ಹೊಂದಿರುವವರು ಮೊಬೈಲ್‌ ಆ್ಯಪ್‌ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತರಿ ಪಡಿಸಿಕೊಳ್ಳಬೇಕು’ ಎಂದರು.

ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಹಾಗೂ ಎನ್‌ಸಿಸಿ ಅಧಿಕಾರಿಗಳು, ಸಿಮ್ಸ್ ಟೀಚರ್ಸ್‌ ಸಂಸ್ಥೆ ಅಧ್ಯಕ್ಷ ಆದ ಡಾ. ಮಾರುತಿ ಸಿ.ವಿ, ಸ್ವೀಪ್ ನೋಡೆಲ್‌ ಅಧಿಕಾರಿ ಡಾ.ವೇದಶ್ರೀ ಎಂ.ಕೆ, ಕಾಯಕಲ್ಪ ನೋಡೆಲ್ ಅಧಿಕಾರಿಗಳಾದ ಡಾ.ಮುರುಗೇಶ್ ಕೆ, ಸಿಮ್ಸ್ ಟೀಚರ್ಸ್‌ ಅಸೋಸಿಯೇಶನ್ ಕಾರ್ಯದರ್ಶಿಗಳಾದ ಡಾ.ಗಿರೀಶ್ ಬಿ, ಸಮುದಾಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಡಾ.ಮಹೇಶ್, ಡಾ.ಸಂತೋಷ್, ಎನ್‌ಸಿಸಿ ವಿದ್ಯಾರ್ಥಿಗಳಾದ ಜೀವ ಪ್ರಶಾಂತ್ ಮತ್ತು ಅಭಿಷೇಕ್, ಡಾ.ವಿದ್ಯಾಸಾಗರ್ ಕಟ್ಟೆ, ಎಂಬಿಬಿಎಸ್ ವಿದ್ಯಾರ್ಥಿಗಳಾದ ಮನೋಜ್ ಸಿ.ಆರ್. ಸುದೀಪ್, ವಿನಯ್ ಕುಮಾರ್ ಜಿ, ವೈಶಾಖ್ ದರ್ಶನ್, ಕರಣ್ ಮಾಥುರ್, ಕಿರಣ್, ಗುರು ಹಾಗೂ ಇತರೆ ಕೋರ್ಸ್‌ಗಳ ವಿದ್ಯಾರ್ಥಿಗಳು ಇದ್ದರು.

20 ಕಿ.ಮೀ ಸೈಕಲ್ ರ‍್ಯಾಲಿಯಲ್ಲಿ ವಿಜೇತರಾದ ವಿದ್ಯಾರ್ಥಿ ದರ್ಶನ್ ಅವರಿಗೆ ₹1000 ನಗದು ಬಹುಮಾನ ನೀಡಲಾಯಿತು.

ಅರಿವಳಿಕೆ ತಜ್ಞ ಡಾ.ಸಂತೋಷ್‌ ಕುಮಾರ್‌ ಅವರು ನಂಜನಗೂಡಿನಿಂದ ಚಾಮರಾಜನಗರದವರೆಗೂ ಸೈಕಲ್‌ನಲ್ಲೇ ಬಂದು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.