ಸಾಕ್ಷಿ ದೂರುದಾರ
ಚಾಮರಾಜನಗರ: ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಪ್ರಕರಣದ ದೂರದಾರ, ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲ ತಾಲ್ಲೂಕಿನ ಚಿಕ್ಕರಸಂಪಾಳ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು’ ಎಂದು, ಅವರ ಎರಡನೇ ಪತ್ನಿ ಎಂದು ಹೇಳಿಕೊಂಡಿರುವ ಮಲ್ಲಿಕಾ ಎಂಬವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘11 ವರ್ಷಗಳ ಹಿಂದೆ ಧರ್ಮಸ್ಥಳ ಬಿಟ್ಟುಬಂದಿದ್ದ ಅವರು, ಕೆಲವು ತಿಂಗಳ ಹಿಂದೆ ಕೂಲಿಗೆ ಹೋದವರು ಮರಳಿ ಬಂದಿಲ್ಲ’ ಎಂದಿದ್ದಾರೆ.
‘ಪತಿ ಯಾವ ಧರ್ಮಕ್ಕೂ ಮತಾಂತರವಾಗಿರಲಿಲ್ಲ. ಶವಗಳನ್ನು ಹೂತಿರುವ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ. 7 ವರ್ಷ ಧರ್ಮಸ್ಥಳದಲ್ಲಿ ಪತಿಯೊಂದಿಗೆ ಸ್ವಚ್ಛತಾ ಕೆಲಸ ಮಾಡಿದ್ದೆ. ಇಬ್ಬರು ಮಕ್ಕಳೊಂದಿಗೆ ಬದುಕುತ್ತಿದ್ದೇನೆ. ಈಚೆಗೆ ಎಸ್ಐಟಿ ಪೊಲೀಸರು ಬಂದು ವಿಚಾರಣೆ ಮಾಡಿಕೊಂಡು ಹೋಗಿದ್ದಾರೆ’ ಎಂದು ಹೇಳಿದರು.
ಸಹೋದರ ಆರ್ಮುಗಂ ಮಾತನಾಡಿ, ‘ಆತ ಒಳ್ಳೆಯ ವ್ಯಕ್ತಿ. ಪ್ರಕರಣದ ಹಿಂದೆ ಅನ್ಯರ ಕೈವಾಡವಿರುವ ಅನುಮಾನವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.