ಚಾಮರಾಜನಗರ: ನಗರದ ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ 5,000 ಮೀಟರ್ ಓಟದ ಸ್ಪರ್ಧೆಯಲ್ಲಿ ಪಿ.ಮಣಿಕಂಠ ಪ್ರಶಸ್ತಿ ಮುಡಿಗೇರಿಸಿಕೊಂಡರು. ಎ.ಅಶ್ವಿನ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಫಲಿತಾಂಶ–100 ಮೀ ಓಟ: ಎಸ್.ಮನು ಪ್ರಥಮ, ಮಹದೇವ ಪ್ರಸಾದ್ ದ್ವಿತೀಯ. ಮಹಿಳೆಯರ ವಿಭಾಗ: ಆಲಿಯಾ ಜಾಸ್ಮಿನ್ ಪ್ರಥಮ, ಪಾರ್ವತಿ ದ್ವಿತೀಯ. 200 ಮೀ ಓಟ: ಎಚ್.ಪಿ.ರಕ್ಷಿತ್ ಪ್ರಥಮ, ಎಸ್.ಮನು ದ್ವಿತೀಯ, ಅಲಿಯಾ ಜಾಸ್ಮಿನ್ ಪ್ರಥಮ, ಪಾರ್ವತಿ ದ್ವಿತೀಯ. 400 ಮೀ ಓಟ: ಎನ್.ಮನೋಜ್ ಪ್ರಥಮ, ತಮರಸಗೌಡ ನಿಂಗನಗೌಡ ದೊಡ್ಡಮನಿ ದ್ವಿತೀಯ, ಪಾರ್ವತಿ ಪ್ರಥಮ, ಪಿ.ವಂದಿತಾ ದ್ವಿತೀಯ. 800 ಮೀ ಓಟ: ಎಚ್.ಎನ್. ಅಭಿನವ್ ಪ್ರಥಮ, ಡಿ.ರಾಜು ದ್ವಿತೀಯ, ಪಿ.ವಂದಿತಾ ಪ್ರಥಮ, ಐಶ್ವರ್ಯ ದ್ವಿತೀಯ.
1500 ಮೀ ಓಟ: ಬಿ.ಮಲ್ಲಿಕಾರ್ಜುನ ಪ್ರಥಮ, ಪಿ. ಶಶಿಧರ ದ್ವಿತೀಯ, ಎಂ.ಮಂದಾರ ಪ್ರಥಮ, ಆರ್.ನಿಸರ್ಗಾ ದ್ವಿತೀಯ. 3000 ಮೀ ಓಟ: ನಿಸರ್ಗಾ ಪ್ರಥಮ, ಪ್ರಕೃತಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಡಿಸ್ಕಸ್ ಥ್ರೋ: ಆಶಿಶ್ ಪಿ.ರಾಜ್ ಪ್ರಥಮ, ಅಜಯ್ ಆರ್, ದ್ವಿತೀಯ; ಪಿ.ರೋಷನಿ ಪ್ರಥಮ, ಕುಸುಮಾ ದ್ವಿತೀಯ. ಶಾಟ್‌ಪಟ್: ಎಚ್.ಎಸ್.ಸುಹಾಸ್ ಪ್ರಥಮ, ಖಾದಿರ್ ವೇಲ್ ದ್ವಿತೀಯ; ರೋಷನಿ ಪ್ರಥಮ, ಪ್ರಿಯದರ್ಶಿನಿ ದ್ವಿತೀಯ. ಜಾವೆಲಿನ್ ಥ್ರೋ: ಕೆ.ಚಿನ್ಮಯ್ ಪ್ರಥಮ, ತರುಣ್ ದ್ವಿತೀಯ; ಸುಪ್ರೀತಾ ಪ್ರಥಮ, ಸಂಗೀತಾ ದ್ವಿತೀಯ. ಎತ್ತರ ಜಿಗಿತ: ಕೆ.ಚಿನ್ಮಯ್ ಪ್ರಥಮ, ಎಲ್.ಲಿಖಿತ್ ದ್ವಿತೀಯ; ಅಲಿಯಾ ಜಾಸ್ಮಿನ್ ಪ್ರಥಮ, ಸಿ.ಪಿ.ಯಶಸ್ವಿನಿ ದ್ವಿತೀಯ. ಉದ್ದ ಜಿಗಿತ: ತಮನ್ನ ಖಾನುಮ್ ಪ್ರಥಮ, ಎಂ.ಕೆ.ಪೂಜಾ ದ್ವಿತೀಯ; ಎಂ.ಸಿ.ಮಹದೇವಪ್ರಸಾದ್ ಪ್ರಥಮ, ಎಸ್.ಅಭಿಲಾಷ್ ದ್ವಿತೀಯ ಸ್ಥಾನ ಪಡೆದರು.
ವಾಲಿಬಾಲ್ ಮಹಿಳೆಯರ ವಿಭಾಗದಲ್ಲಿ ಗುಂಡ್ಲುಪೇಟೆಯ ದೇವಿ ಪಾರ್ವತಾಂಬ ನಿಟ್ರೆ ತಂಡ ವಿಜೇತವಾಯಿತು. ಯೋಗ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಮಹಿಳೆಯರ ವಿಭಾಗದಲ್ಲಿ ಎಲ್.ಸುಮಾ, ಪುರುಷರ ವಿಭಾಗದಲ್ಲಿ ಶಿವರಾಮು ಪ್ರಥಮ, ಮಂಜು ದ್ವಿತೀಯ ಸ್ಥಾನ ಪಡೆದರು. ಯೋಗ ಸಾಂಪ್ರದಾಯಿಕ ಸ್ಪರ್ಧೆಯಲ್ಲಿ ಮಂಜು ಪ್ರಥಮ, ಈಶ್ವರ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಸಿ.ಕೆ.ರಂಜಿತಾ ಬಹುಪಾನ ಗೆದ್ದುಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಂಡ ಅಧಿಕಾರಿಗಳು ಉತ್ತಮ ಪ್ರದರ್ಶನಕ್ಕೆ ಹಾರೈಸಿದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿದರು. ಹೆಚ್ಚುವರಿ ಎಸ್‌ಪಿ ಎಂ.ಎನ್. ಶಶಿಧರ್, ನಗರಸಭೆ ನಾಮನಿರ್ದೇಶಿತ ಸದಸ್ಯ ಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಕ್ರೀಡಾಪಟುಗಳಾದ ವಿ.ಶ್ರೀನಿವಾಸಪ್ರಸಾದ್, ಮುಖಂಡ ಚಾ.ರಂ.ಶ್ರೀನಿವಾಸಗೌಡ, ಜಿ.ಬಂಗಾರು ಕಾರ್ಯಕ್ರಮದಲ್ಲಿ ಇದ್ದರು.
ಆಲಿಯಾ ಜಾಸ್ಮಿನ್, ಪಾರ್ವತಿ, ನಂದಿತಾ ಉತ್ತಮ ಪ್ರದರ್ಶನ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದ ಮಹಿಳಾ ಸ್ಪರ್ಧಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.