ಕೊಳ್ಳೇಗಾಲ: ‘ಒಳಚರಂಡಿ ಪಕ್ಕದಲ್ಲೇ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್‌ನಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದೆ’ ಎಂದು ನಿವಾಸಿಗಳು ನಗರಸಭೆ ಸದಸ್ಯೆ ಜಯಮೇರಿಯೊಂದಿಗೆ ದೂರಿದರು.
‘ನಗರದ 23ನೇ ವಾರ್ಡ್‌ನ ರಾಮಸ್ವಾಮಿ ಲೇಔಟ್ ಸಂಪತ್ ಮನೆಗೆ ನಗರಸಭೆಯಿಂದ ನೀರಿನ ಸಂಪರ್ಕ ಪಡೆದಿದ್ದು, ಕುಡಿಯುವ ನೀರಿನ ಪೈಪ್ ಒಳಚರಂಡಿ ಪಿಟ್ ಬದಿಯಲ್ಲೇ ಹಾದು ಹೋಗಿದ್ದು, ಇದೀಗ ಕಲುಷಿತ ನೀರು ಬರುತ್ತಿದೆ’ ಎಂದು ದೂರಿದರು.
‘ಕಳೆದ ಕೆಲವು ದಿನಗಳಿಂದ ಕುಡಿಯುವ ನೀರು ಕಲುಷಿತವಾಗಿದ್ದು, ಸಧ್ಯಕ್ಕೆ ಕ್ಯಾನ್ ನೀರನ್ನು ತೆಗೆದುಕೊಂಡು ಬಳಕೆ ಮಾಡಲಾಗುತ್ತಿದೆ’ ಎಂದು ತಿಳಿಸಿ,‘ನಗರಸಭೆ ಅಧಿಕಾರಿಗಳು ಕ್ರಮ ವಹಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.
‘ಒಂದು ವೇಳೆ ನಮಗೆ ಸರಿಯಾಗಿ ನೀರು ಪೂರೈಕೆ ಆಗದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಬಡಾವಣೆಯ ನಿವಾಸಿಗಳು ಒತ್ತಾಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.