
ಪ್ರಜಾವಾಣಿ ವಾರ್ತೆ
ಹನೂರು: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗೊಂಬೆಗಲ್ಲು ಹಾಡಿಯ ಶಿಕಾರಿ ಕೇತೇಗೌಡ (80) ಎಂಬವರು ಮಂಗಳವಾರ ಆನೆ ದಾಳಿಯಿಂದ ಮೃತಪಟ್ಟರು.
ಗ್ರಾಮಕ್ಕೆ ಹೋಗುವಾಗ ನೆಲ್ಲಿಕತ್ರಿ ಸಮೀಪದ ದೊರೆಯನ ಬೆಟ್ಟದ ದಾರಿಯಲ್ಲಿ ಕಾಡಾನೆ ಹಠಾತ್ ದಾಳಿ ನಡೆಸಿತ್ತು. ಆ ವೇಳೆ ಅವರೊಂದಿಗಿದ್ದ ಕೊಲ್ಲ ಎಂಬವರು ಪ್ರಾಣಾಪಾಯದಿಂದ ಪಾರಾದರು. ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಆನೆದಾಳಿಯಿಂದ ಪಾರು:
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಮೂಲೆಹೊಳೆ-ವಯನಾಡು ಮಾರ್ಗದಲ್ಲಿ ಬೈಕ್ ಸವಾರರೊಬ್ಬರು ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಆನೆಗಳು ಹೆದ್ದಾರಿ ದಾಟುವಾಗ ಅವರು ಅಡ್ಡಲಾಗಿ ಬಂದಿದ್ದು ಆನೆ ಏಕಾಏಕಿ ದಾಳಿಗೆ ಮುಂದಾದಾಗ ಬೈಕ್ ಬಿಟ್ಟು ಓಡಿಹೋಗಿ ಜೀವ ಉಳಿಸಿಕೊಂಡರು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.