ADVERTISEMENT

ಗುಂಡ್ಲುಪೇಟೆ: ತಾಯಿಯಿಂದ ಬೇರ್ಪಟ್ಟು ಶಾಲೆಗೆ ಬಂದ ಮರಿಯಾನೆ

ಆನೆಯ ಚಿನ್ನಾಟ ಕಂಡು ಮಕ್ಕಳು ಸಂತಸ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:18 IST
Last Updated 19 ಆಗಸ್ಟ್ 2025, 2:18 IST
ಕೇರಳದ ಸುಲ್ತಾನ್ ಬತ್ತೇರಿ ತಾಲ್ಲೂಕಿನ ಪುಲುಪಳ್ಳಿ ಗ್ರಾಮದಲ್ಲಿರುವ ಶಾಲಾ ಆವರಣಕ್ಕೆ ಮರಿಯಾನೆ ನುಗ್ಗಿರುವ ದೃಶ್ಯ
ಕೇರಳದ ಸುಲ್ತಾನ್ ಬತ್ತೇರಿ ತಾಲ್ಲೂಕಿನ ಪುಲುಪಳ್ಳಿ ಗ್ರಾಮದಲ್ಲಿರುವ ಶಾಲಾ ಆವರಣಕ್ಕೆ ಮರಿಯಾನೆ ನುಗ್ಗಿರುವ ದೃಶ್ಯ   

ಗುಂಡ್ಲುಪೇಟೆ (ಚಾಮರಾಜನಗರ): ತಾಯಿಯಿಂದ ಬೇರ್ಪಟ್ಟ ಮರಿಯಾನೆಯು ಕೇರಳದ ಸುಲ್ತಾನ್ ಬತ್ತೇರಿ ತಾಲ್ಲೂಕಿನ ಕಾಡಂಚಿನ ಪುಲುಪಳ್ಳಿಯ ಶಾಲಾ ಆವರಣಕ್ಕೆ ಸೋಮವಾರ ನುಗ್ಗಿ ಕೆಲಕಾಲ ಗೊಂದಲ ಸೃಷ್ಟಿಸಿತ್ತು.

ದಾರಿತಪ್ಪಿ ಶಾಲೆಗೆ ಬಂದ ಮರಿಯಾನೆ ಆವರಣದ ತುಂಬೆಲ್ಲ ಅಡ್ಡಾಡಿ ತರಗತಿ ಕೊಠಡಿಯೊಳಗೆ ಪ್ರವೇಶಿಸಲು ಯತ್ನಿಸಿತು. ಅದರ ತುಂಟಾಟ ನೋಡಿ ಮಕ್ಕಳು ದೂರದಿಂದ ಕೇಕೆ ಹಾಕುತ್ತಾ ಖುಷಿಪಟ್ಟ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಶಿಕ್ಷಕರಿಂದ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ ಮರೆಯಾನೆಯನ್ನು ರಕ್ಷಿಸಿದ್ದು, ತಾಯಿಯ ಜೊತೆ ಸೇರಿಸುವ ಯತ್ನದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT