ADVERTISEMENT

ಮಂಚಹಳ್ಳಿ, ಶ್ರೀಕಂಟಪುರದಲ್ಲಿ ಕಾಡಾನೆಗಳ ಹಿಂಡು

ಆತಂಕದಲ್ಲಿ ಗ್ರಾಮಸ್ಥರು; ಆನೆಗಳನ್ನು ಕಾಡಿಗೆ ಅಟ್ಟಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 20:14 IST
Last Updated 9 ಅಕ್ಟೋಬರ್ 2018, 20:14 IST
ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ ವಲಯದ ವ್ಯಾಪ್ತಿಯ ಕಾಡಂಚಿನಲ್ಲಿ ಬೀಡುಬಿಟ್ಟಿರುವ ಆನೆಗಳು
ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ ವಲಯದ ವ್ಯಾಪ್ತಿಯ ಕಾಡಂಚಿನಲ್ಲಿ ಬೀಡುಬಿಟ್ಟಿರುವ ಆನೆಗಳು   

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಭಾಗದ ಓಂಕಾರ್‌ ಅರಣ್ಯ ವಲಯ ವ್ಯಾಪ್ತಿಯ ಮಂಚಹಳ್ಳಿ, ಶ್ರೀಕಂಠಪುರ ಗ್ರಾಮದ ಬಳಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ.

ಆನೆಗಳು ಗ್ರಾಮದೊಳಗೆ ಬಂದಿಲ್ಲ. ಅವು ಕಾಡಿನಲ್ಲೇ ಇದೆ. ಮಂಚಹಳ್ಳಿ, ಶ್ರೀಕಂಠಪುರ ಕಾಡಂಚಿನಲ್ಲಿದ್ದು, ಆನೆಗಳ ಹಿಂಡು ರಸ್ತೆಗೇ ಕಾಣಿಸುತ್ತಿದೆ. ಆದರೆ, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅವುಗಳ ಫೋಟೊ ತೆಗೆಯುವ ಮೂಲಕ ತೊಂದರೆ ನೀಡುತ್ತಿದ್ದಾರೆ. ಆನೆಗಳನ್ನು ಅವುಗಳ ಪಾಡಿಗೆ ಬಿಟ್ಟರೆ ಕಾಡಿಗೆ ಹೋಗುತ್ತವೆ. ಯಾವುದೇ ರೀತಿಯ ತೊಂದರೆ ಮಾಡಿದರೆ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್‌ ತಿಳಿಸಿದರು.

ಆನೆಗಳು ರಸ್ತೆಯನ್ನು ದಾಟಿ ಕೆರೆಗೆ ನೀರು ಕುಡಿಯಲು ಬರುತ್ತವೆ. ಆನೆಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಕಂಬಿಗಳನ್ನು ಅಳವಡಿಸಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮಸ್ಥರ ಮೇಲೆ ದಾಳಿ ಮಾಡುವ ಮುನ್ನ ಅರಣ್ಯ ಇಲಾಖೆ ಸಿಬ್ಬಂದಿಯು ಗಸ್ತು ನಡೆಸಬೇಕು. ಆನೆಗಳನ್ನು ಕಾಡಿಗೆ ಅಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.