ಯಳಂದೂರು: ಭಾರತದಲ್ಲಿ ಜಾನುವಾರುಗಳಿಗೆ ದೈವಿಕ ಸ್ಥಾನ ನೀಡಲಾಗಿದೆ. ಸಂಪತ್ತಿನ ಮೂಲವಾಗಿ ಪರಿಗಣಿಸಲಾಗಿದ್ದು, ಸಾಕಣೆದಾರರು ಗೋವುಗಳ ರಕ್ಷಣೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಶುಕ್ರವಾರ ನೂತನ ಪಶು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿವರ್ಷ ಹಸು, ಎಮ್ಮೆ, ಕುರಿಗಳಿಗೆ ಲಸಿಕೆಗಳನ್ನು ಹಾಕಿಸಬೇಕು. ಹೈನೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಆ ಮೂಲಕ ವರಮಾನ ಗಳಿಸುವತ್ತ ಹೆಚ್ಚಿನ ಗಮನ ನೀಡಬೇಕು. ಸರ್ಕಾರ ನೀಡುವ ಸವಲತ್ತುಗಳನ್ನು ಪಡೆದು ಆರ್ಥಿಕ ಪ್ರಗತಿ ಹೊಂದಬೇಕು ಎಂದು ಹೇಳಿದರು.
ತಾಲ್ಲೂಕು ಪಶು ಆಸ್ಪತ್ರೆ ಅಂಗಳದಲ್ಲಿ ₹ 48 ಲಕ್ಷ ವೆಚ್ಚದಲ್ಲಿ ಹೈಟೆಕ್ ಕಟ್ಟಡವನ್ನು ನಿರ್ಮಿಸಲಾಗುವುದು. ಒಂದೇ ಸೂರಿನಲ್ಲಿ ಎಲ್ಲ ಸಾಕು ಪ್ರಾಣಿಗಳಿಗೂ ನೆರವು ನೀಡಲು ಅನುವಾಗುವಂತೆ ಪಶು ವೈದ್ಯರನ್ನು ನೇಮಿಸಲಾಗುವುದು. ಗ್ರಾಮಗಳಲ್ಲೂ ಪಶುಗಳ ಕ್ಷೇಮಪಾಲನೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಚಂದ್ರು, ಜಂಟಿ ನಿರ್ದೇಶಕ ಡಾ.ಶಿವಣ್ಣ, ನಿರ್ದೇಶಕ ವೆಂಕಟೇಶ್, ಪ.ಪಂ.ಅಧ್ಯಕ್ಷೆ ಲಕ್ಷ್ಮಿ, ಸದಸ್ಯ ಮಹದೇವನಾಯಕ, ಪಶು ವೈದ್ಯಾಧಿಕಾರಿ ಶಿವರಾಜು ಹಾಗೂ ಸಿಬ್ಬಂದಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.