ADVERTISEMENT

ಚಾಮರಾಜನಗರ: ಶೇಖರಣೆ ಹಂತದಲ್ಲಿ ಶೇ 30 ಆಹಾರ ಉತ್ಪನ್ನಗಳು ಹಾಳು

ರೈತರು ಬೆಳೆ ಬೆಳೆಯಲು ಮಾತ್ರವಲ್ಲ; ಶೇಖರಣೆಗೂ ಒತ್ತು ನೀಡಿ: ಡಾ.ಶಿವರಾಯ್ ನಾವಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 16:22 IST
Last Updated 1 ಅಕ್ಟೋಬರ್ 2024, 16:22 IST
ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಬೆಟ್ಟದಪುರ ಗ್ರಾಮದಲ್ಲಿ ಮಂಗಳವಾರ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ವತಿಯಿಂದ ಕೃಷಿ ವಿಭಾಗದ  ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ನಡೆಯಿತು
ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಬೆಟ್ಟದಪುರ ಗ್ರಾಮದಲ್ಲಿ ಮಂಗಳವಾರ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ವತಿಯಿಂದ ಕೃಷಿ ವಿಭಾಗದ  ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ನಡೆಯಿತು   

ಚಾಮರಾಜನಗರ: ದೇಶದಲ್ಲಿ ರೈತರು ಉತ್ಪಾದಿಸುವ ಒಟ್ಟು ಆಹಾರ ಉತ್ಪನ್ನಗಳಲ್ಲಿ ಶೇ 30ರಷ್ಟು ಶೇಖರಣೆಯ ಹಂತದಲ್ಲಿ ಹಾಳಾಗುತ್ತಿದ್ದು, ಇದನ್ನು ತಡೆದರೆ ದೇಶದ ಆಹಾರ ಭದ್ರತೆ ಮತ್ತಷ್ಟು ಸುಭದ್ರವಾಗಲಿದೆ ಎಂದು ತಜ್ಞ ಡಾ.ಶಿವರಾಯ್ ನಾವಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹರವೆ ಹೋಬಳಿಯ ಬೆಟ್ಟದಪುರ ಗ್ರಾಮದಲ್ಲಿ ಮಂಗಳವಾರ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ವತಿಯಿಂದ ಕೃಷಿ ವಿಭಾಗದ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ‘ಸುಧಾರಿತ ಶೇಖರಣೆಗಳ ರಚನೆ ಮತ್ತು ದಂಶಕಗಳ ನಿರ್ವಹಣೆ’ ಕುರಿತು ಮಾತನಾಡಿದರು.

‘ಆಹಾರ ಪದಾರ್ಥಗಳನ್ನು ಶೇಖರಿಸಿಡುವಾಗ ಹಾಳಾಗದಂತೆ ಎಚ್ಚರವಹಿಸಬೇಕಾದ ಅಗತ್ಯವಿದೆ. ಶೇಖರಣ ಸಮಯದಲ್ಲಿ ಕಾಡುವ ಕೀಟಗಳನ್ನು ನಿಯಂತ್ರಿಸುವುದರ ಮೂಲಕವೂ ಹಾನಿ ತಡೆಗಟ್ಟಬಹುದು. ಬೆಳೆಯನ್ನು ಶೇಖರಣೆ ಮಾಡುವಾಗ ಹೊಸ ಚೀಲಗಳನ್ನು ಬಳಸುವುದರಿಂದ ನಷ್ಟವಾಗುವ ಪ್ರಮಾಣ ಕಡಿಮೆಯಾಗಲಿದೆ. ಹಳೆಯ ಚೀಲಗಳನ್ನು ಬಳಿಸಿದರೂ ಕ್ರಿಮಿಗಳು ನಾಶವಾಗುವಂತೆ ಅವುಗಳನ್ನು ಅದ್ದಿ ಒಣಗಿಸಿ ಬಳಸುವುದರಿಂದ ಕೀಟಗಳ ಹಾವಳಿ ಕಡಿಮೆಯಾಗಲಿದೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಧಾನ್ಯಗಳ ಶೇಖರಣೆಯ ವಿಧಾನಗಳ ಬಗ್ಗೆ ಆಡಿಯೊ ಮತ್ತು ವಿಡಿಯೊ ಪ್ರಾತ್ಯಕ್ಷಿಕೆ ಮೂಲಕ ಗ್ರಾಮಸ್ಥರಿಗೆ ವಿವರಿಸಿದರು. ಬಳಿಕ ರೈತರೊಂದಿಗೆ ಸಂವಾದ, ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಸುಭದ್ರಮ್ಮ ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಸುಬ್ಬಮ್ಮ, ಮಾದೇವಪ್ಪ, ಪುಟ್ಟಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನಬಸಪ್ಪ, ಗ್ರಾಮದ ಮುಖಂಡರು, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.