ಸಂತೇಮರಹಳ್ಳಿ: ಇಲ್ಲಿನ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಅವ್ಯವಸ್ಥೆ ಖಂಡಿಸಿ ರೈತರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.
ಕೃಷಿ ಉಪ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದಂತ ಧಾನ್ಯಗಳಿಗೆ ಅವಕಾಶ ನೀಡದೇ ರೈತರಲ್ಲದ ದಲ್ಲಾಳಿಗಳಿಗೆ ಮಾರುಕಟ್ಟೆ ಪ್ರಾಂಗಣ ಬಳಕೆಯಾಗುತ್ತಿದೆ. ಮಾರುಕಟ್ಟೆ ಇರುವುದು ರೈತರು ಬೆಳೆದ ಪದಾರ್ಥಗಳನ್ನು ಶೇಖರಿಸಿಡಲು ಆದರೇ ಇಲ್ಲಿ ದಲ್ಲಾಳಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಲ್ಲಿನ ಅವ್ಯವಸ್ಥೆಗೆ ಎಪಿಎಂಸಿ ಅಧಿಕಾರಿಗಳೆ ನೇರವಾಗಿ ಕಾರಣರಾಗಿದ್ದಾರೆ. ರೈತರ ಹಿತಾಶಕ್ತಿ ಕಾಪಾಡದೇ ದಲ್ಲಾಳಿಗಳು ಹೇಳಿದಂತೆ ಕೇಳುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು.
ದಲ್ಲಾಳಿಗಳ ಪರವಾಗಿ ನಿಂತಿರುವ ಎಪಿಎಂಸಿ ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರು ಬೆಳೆದಂತ ಪದಾರ್ಥಗಳನ್ನು ಶೇಖರಿಸಿಡಲು ಗೋದಾಮಿನಲ್ಲಿ ಅವಕಾಶ ನೀಡಬೇಕು. ಮುಂದಿನ ದಿನಗಳಲ್ಲಿ ಇದೇರೀತಿ ಮುಂದುವರಿದರೇ ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರೈತಸಂಘದ ಜಿಲ್ಲಾಘಟಕದ ಅಧ್ಯಕ್ಷ ಹೊನ್ನೂರು ಬಸವಣ್ಣ, ರೈತ ಮುಖಂಡರಾದ ಕಾವುದವಾಡಿ ಲೋಕೇಶ್, ಮಹದೇವೇಗೌಡ, ನಾಗರಾಜು, ಸತೀಶ್, ಮಲ್ಲೇಶ್, ಬಸವಣ್ಣ, ಜಾಣಪ್ಪ, ರವೀಂದ್ರ, ಗಿರೀಶ್, ಕುಮಾರಸ್ವಾಮಿ, ಕೇಶವಮೂರ್ತಿ, ನಟರಾಜು, ಕೆ.ಎಂ.ವೀರತಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.