ADVERTISEMENT

ಕಾವೇರಿ ವನ್ಯಧಾಮದಲ್ಲಿ ಮತ್ತೆ ಬೆಂಕಿ: ಅಂದಾಜು 300 ಎಕರೆ ಕಾಡು ಬೆಂಕಿಗೆ ಆಹುತಿ

ಕೊತ್ತನೂರು ವನ್ಯಜೀವಿ ವಲಯದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 15:20 IST
Last Updated 15 ಏಪ್ರಿಲ್ 2020, 15:20 IST
ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ಬುಧವಾರ ಕಂಡು ಬಂದಿರುವ ಬೆಂಕಿ
ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ಬುಧವಾರ ಕಂಡು ಬಂದಿರುವ ಬೆಂಕಿ   

ಹನೂರು (ಚಾಮರಾಜನಗರ): ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದಲ್ಲಿ ಬುಧವಾರ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಅಂದಾಜು 300 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಕಾವೇರಿ ನದಿಯಿಂದ ಡಿಲೈನ್‌ವರೆಗೂ ಬೆಂಕಿ ವ್ಯಾಪಿಸಿದ್ದು, ಬೆಳಿಗ್ಗೆ10ರಿಂದ ಸಂಜೆ 7ರ ವರೆಗೂ ನಿರಂತರವಾಗಿ ಉರಿದಿದೆ. ವನ್ಯಜೀವಿ ವಲಯದ ಮುತ್ತತ್ತಿ, ಅಂಕಾಳಗುಡಿ, ಕೆರೆ ಆಣೆ, ಬ್ಯಾಟರಾಯನ ದೇವಸ್ಥಾನ ಹಾಗೂ ಕಾರಯ್ಯನಕೆರೆ ಅರಣ್ಯ ಪ್ರದೇಶಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ.

ಕೆಲವು ದಿನಗಳಿಂದೀಚೆಗೆಕೊತ್ತನೂರು ವನ್ಯಜೀವಿ ವಲಯದಲ್ಲಿ ಮೇಲಿಂದ ಮೇಲೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ವಲಯದಲ್ಲಿ ಈ ವರ್ಷ ಸರಿಯಾಗಿ ಬೆಂಕಿ ರೇಖೆ ನಿರ್ಮಾಣ ಮಾಡಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ADVERTISEMENT

ಜನವರಿ 15ರಂದು ಸುಂಡ್ರಳ್ಳಿ ಬೀಟ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಏ.4ರಂದು ಚಪ್ಪರದಟ್ಟಿ ಹಾಗೂ ದೊಡ್ಡಮರಳು ಹೆಗ್ಗು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು, ಸುಮಾರು 200 ಎಕರೆಯಷ್ಟು ಅರಣ್ಯ ಬೆಂಕಿಗಾಹುತಿಯಾಗಿತ್ತು.

ಈಗಾಗಲೇ ವನ್ಯಜೀವಿ ವಲಯದ ಶೇ 70 ಅರಣ್ಯ ಪ್ರದೇಶಕ್ಕೆ ಸುಟ್ಟು ಹೋಗಿದೆ.ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.