ADVERTISEMENT

ಪೊನ್ನಾಚಿಯಲ್ಲಿ ಬಿದಿರು ಉತ್ಪನ್ನಗಳ ಘಟಕ: ಅರಣ್ಯವಾಸಿ, ಗ್ರಾಮಸ್ಥರಿಗೆ ಉದ್ಯೋಗ

ಅರಣ್ಯ ಇಲಾಖೆ

ಬಿ.ಬಸವರಾಜು
Published 1 ಮಾರ್ಚ್ 2021, 3:46 IST
Last Updated 1 ಮಾರ್ಚ್ 2021, 3:46 IST
ಬಿದಿರಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ನಿರತರಾಗಿರುವ ಮಹಿಳೆಯರು
ಬಿದಿರಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ನಿರತರಾಗಿರುವ ಮಹಿಳೆಯರು   

ಹನೂರು (ಚಾಮರಾಜನಗರ): ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಹಾಗೂ ಅರಣ್ಯವಾಸಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ಅರಣ್ಯ ಇಲಾಖೆಯು ಪೊನ್ನಾಚಿ ಗ್ರಾಮದಲ್ಲಿ ಬಿದಿರು ಉತ್ಪನ್ನಗಳ ತಯಾರಿಕಾ ಘಟಕ ಆರಂಭಿಸಿದೆ.

ಇಲಾಖೆಯ ಹೆಚ್ಚುವರಿಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಹಾಗೂ ರಾಷ್ಟ್ರೀಯ ಬಿದಿರು ಯೋಜನೆ ಘಟಕದ ನಿರ್ದೇಶಕ ಆರ್.ಕೆ.ಶ್ರೀವಾತ್ಸವ್ ಘಟಕಕ್ಕೆ ಚಾಲನೆ ನೀಡಿದ್ದಾರೆ.ಸದ್ಯ ಘಟಕದಲ್ಲಿ 100 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ರಾಷ್ಟ್ರೀಯ ಬಿದಿರು ಯೋಜನೆ ಅಡಿಯಲ್ಲಿ ಈ ಘಟಕ ಆರಂಭಿಸಿದ್ದು, ಪೂರ್ಣಪ್ರಮಾಣದಲ್ಲಿ ಘಟಕ ಆರಂಭಗೊಂಡ ನಂತರ 1,000 ಜನರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಇದೆ ಎಂದು ಹೇಳುತ್ತಾರೆ ಅರಣ್ಯಾಧಿಕಾರಿಗಳು.

ADVERTISEMENT

ಬಿದಿರಿನಿಂದ ವಿವಿಧ ವಸ್ತುಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಮೊದಲಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದವರು ತಮ್ಮ ಗ್ರಾಮಗಳಲ್ಲಿಯೇ ವಸ್ತುಗಳನ್ನು ತಯಾರಿಸಿ ಪೊನ್ನಾಚಿಯಲ್ಲಿರುವ ಮುಖ್ಯ ಘಟಕಕ್ಕೆ ಕಳುಹಿಸಿಕೊಡಬೇಕು. ಬಳಿಕ ಅವರಿಗೆ ಸಂಭಾವನೆಯನ್ನು ನೀಡಲಾಗುತ್ತದೆ.

ಟೇಬಲ್ಲ್ಯಾಂಪ್‌, ಚೀಲ, ಕುರ್ಚಿ,ಮಂಚ,ಊಟದಟೇಬಲ್,ನೀರಿನಬಾಟಲಿಸೇರಿದಂತೆ ದಿನಬಳಕೆಗೆ ಅಗತ್ಯವಾದ ವಸ್ತುಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಮಹಿಳೆಯರು ತಯಾರಿಸಿದ ವಸ್ತುಗಳನ್ನು ಮಾರ್ಕೆಟಿಂಗ್ಮಾಡಲು ‘ಇಂಡಸ್ಟ್ರಿಫೌಂಡೇಷನ್’ ಎಂಬಸಂಸ್ಥೆ ಅರಣ್ಯಇಲಾಖೆಯೊಂದಿಗೆಕೈಜೋಡಿಸಿದೆ. ಇದೇಸಂಸ್ಥೆಸ್ಥಳೀಯರಿಗೆತರಬೇತಿನೀಡುವುದರಜೊತೆಗೆಅವರುತಯಾರಿಸಿದ ವಸ್ತುಗಳನ್ನು ಮಾರಾಟಮಾಡಲಿದೆ.

ತಪ್ಪಲಿದೆ ವಲಸೆ:‘ಸೋಲಿಗರು ಸೇರಿದಂತೆ ಅರಣ್ಯದ ಒಳಗೆ ಹಾಗೂ ಕಾಡಂಚಿನಲ್ಲಿ ವಾಸಿಸುತ್ತಿರುವವರು ಕೂಲಿ ಅರಸಿಕೊಂಡು ಹೊರ ಜಿಲ್ಲೆ, ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಈ ಘಟಕ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ, ವಲಸೆಗೆ ಕಡಿವಾಣ ಬೀಳಲಿದೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.