ಬಂಧನ
(ಸಾಂದರ್ಭಿಕ ಚಿತ್ರ)
ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಸಮೀಪದಲ್ಲಿ ಜೂಜಾಡುತ್ತಿದ್ದ 14 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ದೊಡ್ಡಮೋಳೆ ಗ್ರಾಮದ ಅಣ್ಣಪ್ಪ, ಕಾಗಲವಾಡಿ ವಿನಯ್, ಮಸಣಾಪುರ ಅಶ್ವತ, ರಾಜ ಶೆಟ್ಟಿ, ಮೊಹಮ್ಮದ್ ಇಫ್ತೀಯಾಜ್, ರಾಮಸಮುದ್ರ ದುಂಡು ಮಾದೇವ, ಚಾಮರಾಜನಗರದ ಸುರೇಶ್, ಸಮಾಜವಾದಿ ನಾರಾಯಣಸ್ವಾಮಿ, ಮಾದೇವಸ್ವಾಮಿ, ಪುತ್ತನಪುರ ಪ್ರಸನ್ನ, ಗುಂಡ್ಲುಪೇಟೆ ತಾಲ್ಲೂಕಿನ ಹೊಸೂರು ಗ್ರಾಮದ ನಾಗರಾಜು, ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಸಿದ್ದಪ್ಪಸ್ವಾಮಿ, ಮಾದೇವಸ್ವಾಮಿ, ಮಹದೇವ ಪ್ರಸಾದ್ ಬಂಧಿತ ಆರೋಪಿಗಳು.
ಆರೋಪಿಗಳು ಪ್ರತಿನಿತ್ಯ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ವರೆಗೆ ಪಿಎಸ್ಐ ಸುಪ್ರೀತ್ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಪಣಕ್ಕಿಟ್ಟಿದ್ದ ₹1.8 ಲಕ್ಷ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳನ್ನು ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.