
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಯಳಂದೂರು: ತಾಲ್ಲೂಕಿನ ಕೆಸ್ತೂರು ಹೊರವಲಯದ ಕುಂತೂರು ನಾಲೆ ಬಳಿ ಭಾನುವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಮೇಲೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಎಸ್ಐ ಆಕಾಶ್ ಅವರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಕುಂತೂರು ಗ್ರಾಮದ ಮದೇಶ, ಮಹದೇವ, ಬಳೆಪೇಟೆ ಬಸವರಾಜು, ಕೆಸ್ತೂರು ಪ್ರಭುಸ್ವಾಮಿ, ಬಸವಪುರ ರವಿ ಜೂಜಾಟದ ಸಮಯದಲ್ಲಿ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಕೆಸ್ತೂರು ಪ್ರಮೋದ್ ಪರಾರಿಯಾಗಿದ್ದಾರೆ.
ಆಟದ ಸ್ಥಳಕ್ಕೆ ತೆರಳಲು ಬಳಸಿದ್ದ 4 ಬೈಕ್ ಹಾಗೂ ಪಣಕ್ಕೆ ಇಟ್ಟಿದ್ದ ₹1,600 ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಪಿಎಸ್ಐ ಆಕಾಶ್, ವೃತ್ತ ಕಚೇರಿ ಹೆಡ್ ಕಾನ್‌ಸ್ಟೇಬಲ್‌ಗಳಾದ ಸುಕ್ರನಾಯಕ, ಚನ್ನಯ್ಯ, ಶಿವಮೂರ್ತಿ, ಪ್ರಮೋದ್, ರಂಗಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.