ADVERTISEMENT

ಕೊಳ್ಳೇಗಾಲ: ಗರ್ಲ್ಸ್ ಹೋಂ ವಸತಿ ಶಾಲೆ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:22 IST
Last Updated 1 ಜನವರಿ 2026, 7:22 IST
ಕೊಳ್ಳೇಗಾಲ ಇಲ್ಲಿನ ಗರ್ಲ್ಸ್ ಹೋಂ ಹೆಣ್ಣು ಮಕ್ಕಳ ವಸತಿ ಶಾಲೆಗೆ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಂಪೌಂಡ್ ಹಾರಿ ಬಂದು ಕಿಟಕಿಯಿಂದ ತೊಂದರೆ ನೀಡುತ್ತಿರುವ ಸಂಬಂಧ ನಗರ ಪೊಲೀಸ್ ಠಾಣೆಯ ಪಿಎಸ್ಐ ವರ್ಷ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಕೊಳ್ಳೇಗಾಲ ಇಲ್ಲಿನ ಗರ್ಲ್ಸ್ ಹೋಂ ಹೆಣ್ಣು ಮಕ್ಕಳ ವಸತಿ ಶಾಲೆಗೆ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಂಪೌಂಡ್ ಹಾರಿ ಬಂದು ಕಿಟಕಿಯಿಂದ ತೊಂದರೆ ನೀಡುತ್ತಿರುವ ಸಂಬಂಧ ನಗರ ಪೊಲೀಸ್ ಠಾಣೆಯ ಪಿಎಸ್ಐ ವರ್ಷ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.   

ಕೊಳ್ಳೇಗಾಲ: ಇಲ್ಲಿನ ಗರ್ಲ್ಸ್ ಹೋಂ ವಸತಿ ಶಾಲೆಗೆ ಮಂಗಳವಾರ ರಾತ್ರಿ ಕಾಂಪೌಂಡ್ ಹಾರಿ ಬಂದ ವ್ಯಕ್ತಿಯು ಕಿಟಕಿ ಮೂಲಕ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ ತೋರಿ ಪರಾರಿಯಾಗಿದ್ದಾನೆ.

ಗರ್ಲ್ಸ್ ಹೋಂ ನಲ್ಲಿ ಸುಮಾರು 37 ಹೆಣ್ಣು ಮಕ್ಕಳು ವಾಸವಿದ್ದು ಅಲ್ಲೇ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಕಿಟಕಿ ಬಳಿ ಮಲಗಿದ್ದ 5ನೇ ತರಗತಿ ಬಾಲಕಿಗೆ ಕೋಲಿನಿಂದ ತಿವಿಯಲಾಗಿದೆ. ಎಚ್ಚರಗೊಂಡ ಬಾಲಕಿ ಜೋರಾಗಿ ತಿರುಚಿಕೊಂಡಿದ್ದು, ಸಿಬ್ಬಂದಿ ಬಂದು ನೋಡಿದಾಗ ವ್ಯಕ್ತಿ ಓಡಿಹೋಗಿದ್ದಾನೆ.

ಸಿಸಿಟಿವಿಯಲ್ಲಿ ವೀಕ್ಷಣೆ ಮಾಡಿದಾಗ ವ್ಯಕ್ತಿ ಓಡಾಡಿರುವುದು ರೆಕಾರ್ಡ್ ಆಗಿದೆ. ನಗರ ಪೊಲೀಸ್ ಠಾಣೆಗೆ ಶಾಲೆಯಿಂದ ದೂರು ನೀಡಲಾಗಿದ್ದು, ಪಿಎಸ್ಐ ವರ್ಷ ಅವರು ಸಿಬ್ಬಂದಿಯೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದು, ಮೂರು ಬಾರಿ ಬೀಟ್ ಪೊಲೀಸ್ ಅವರನ್ನು ಕಳುಹಿಸಿ ಕೊಡುತ್ತೇವೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.