ಸಂತೇಮರಹಳ್ಳಿ: ಇಲ್ಲಿನ ಜನತಾ ಕಾಲೊನಿಯ ನಿವಾಸಿ ರಂಗಸ್ವಾಮಿ ಎಂಬುವರ ಮನೆಯ ಬೀಗ ಒಡೆದ ಕಳ್ಳರು ಶುಕ್ರವಾರ ಚಿನ್ನ ಹಾಗೂ ಹಣ ಕಳವು ಮಾಡಿದ್ದಾರೆ.
ಸಂಬಂಧಿಕರ ಮನೆಗೆ ಹೋಗಿದ್ದ ರಂಗಸ್ವಾಮಿ ವಾಪಸ್ ಬಂದಾಗ ಕೃತ್ಯ ಗಮನಕ್ಕೆ ಬಂದಿತ್ತು. ಮನೆಯಲ್ಲಿದ 24 ಗ್ರಾಂ ಚಿನ್ನ ಹಾಗೂ ₹55 ಸಾವಿರ ನಗದು ಕಳವಾಗಿದೆ.ಬೆರಳ್ಳಚ್ಚು ತಜ್ಞರು ಹಾಗೂ ಶ್ವಾನದಳ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ರಾತ್ರಿ ವೇಳೆಯಲ್ಲಿ ಹೆಚ್ಚು ಗಸ್ತು ನಡೆಸಬೇಕೆಂದು ನಿವಾಸಿಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.