
ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ಇಲ್ಲಿನ ವೆಂಕಟೇಶ್ವರ ಮಹಲ್
ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ಮದುವೆ ಶಾಸ್ತ್ರಕ್ಕೆ ಸಿದ್ಧತೆ ನಡೆದಿರುವಾಗಲೇ, ತಾಲ್ಲೂಕಿನ ಕುಣಗಳ್ಳಿಯ ಮದುಮಗ ರವೀಶ್ ಎಂಬವರಿಗೆ ಮೂವರು ಅಪರಿಚಿತರು ಚೂರಿಯಿಂದ ಇರಿದು
ಪರಾರಿಯಾಗಿದ್ದಾರೆ.
ಶುಕ್ರವಾರ ರವೀಶ್ ಹಾಗೂ
ಹೊಸ ಅಣ್ಣಗಳ್ಳಿ ಬಡಾವಣೆಯ ನಿವಾಸಿ ನಯನಾ ಅವರ ವಿವಾಹ ನಿಗದಿಯಾಗಿತ್ತು. ರವೀಶ್ ಕಾರಿನಲ್ಲಿ ಕಲ್ಯಾಣ ಮಂಟಪಕ್ಕೆ ಬರುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಎಡಗೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಸಂಬಂಧಿಗಳು ಕೂಡಲೇ ಅವರನ್ನು ನಗರದ ಸರ್ಕಾರಿ
ಉಪವಿಭಾಗ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
‘ಆರು ತಿಂಗಳ ಹಿಂದೆ ಅಪರಿತನೊಬ್ಬ ಕರೆ ಮಾಡಿ ಹುಡುಗಿಯನ್ನು ಮದುವೆಯಾದರೆ ಪ್ರಾಣ ತೆಗೆಯುವುದಾಗಿ ಬೆದರಿಕೆಯೊಡ್ಡಿದ್ದ. ಬಳಿಕವೂ ಕರೆ ಮಾಡಿ ಬೆದರಿಕೆ ಒಡ್ಡುತ್ತಲೇ ಇದ್ದ’ ಎಂದು ತಿಳಿಸಿರುವ ರವೀಶ್, ‘ಮದುವೆಯಾಗುವ ಬಗ್ಗೆ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸುವೆ’ ಎಂದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.