
ಹನೂರು: ದಂಟಳ್ಳಿ ಏತ ನೀರಾವರಿ ಯೋಜನೆ ರೂಪಿಸಿ ಅಂತರ್ಜಲ ಅಭಿವೃದ್ಧಿಪಡಿಸುವಂತೆ ರೈತ ಸಂಘದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ 78ನೇ ದಿನಕ್ಕೆ ಕಾಲಿಟ್ಟಿತು.
ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು, ಮಕ್ಕಳು, ಅಹೋರಾತ್ರಿ ಧರಣಿ ನಡೆಸುತ್ತಿದ್ದು 78 ದಿನ ಕಳೆದರೂ ಈ ಭಾಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಸದರು, ಶಾಸಕರು, ಜಿಲ್ಲಾಡಳಿತ ಮತ್ತು ಸರ್ಕಾರ ವಿಫಲವಾಗಿವೆ ಎಂದು ಧರಣಿ ನಿರತರು ಆರೋಪಿಸಿದರು.
ಹನೂರಿನಲ್ಲಿ ಜನಸಂಪರ್ಕ ಸಭೆಗೆ ಭಾಗವಹಿಸಲಿದ್ದ ಸಂಸದ, ಶಾಸಕರು ಹಾಗೂ ಜಿಲ್ಲಾಧಿಕಾರಿಯನ್ನು ಪ್ರತಿಭಟನನಿರತರು ಭೇಟಿ ಮಾಡಿ, ಈಗಾಗಲೇ ನೀವು ನೀಡಿರುವ ಭರವಸೆ ಸಮಯ ಮುಗಿಯುತ್ತಿದ್ದು ತುರ್ತಾಗಿ ಡಿಪಿಆರ್ ಮಾಡಿಸಿ ಭೂಮಿಪೂಜೆ ಮಾಡಿಸುವಂತೆ ಒತ್ತಾಯಿಸಲು ಸಿದ್ಧರಿದ್ದರು. ಆದರೆ ಸಭೆ ಸ್ಥಗಿತಗೊಂಡಿದೆ ಎಂಬ ವಿಚಾರ ತಿಳಿದು ಜನರು ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ವಡಕೆಹಳ್ಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದದರು.
ಪ್ರತಿಭಟನೆಯಲ್ಲಿ ಸಿಸ್ಟರ್ ಮಹಿಳಾ ಸಂಘಟನೆಗಳು, ಓಡಿಪಿ ಮಹಿಳಾ ಸಂಘಟನೆಗಳು, ಚರ್ಚ್ ಫಾದರ್ ಸೇಸುರಾಜ್, ಸಿಸ್ಟರ್ ಸಲೋಮಿ, ಶೈಲೇಂದ್ರ, ಮೊಳೆರಾಜು, ವಸಂತ್ ಕುಮಾರ್, ಆರ್.ಅರ್ಪುದರಾಜ್, ಮಾಜಿ ಯೋಧರಾದ ಮರಿಯ ಜೋಸೆಫ್, ಮಾಣಿಕ್ಯಂ, ಅರುಣ್ ಕುಮಾರ್, ಡೇವಿಡ್ ರಾಜಕುಮಾರ್, ಡೇವಿಡ್, ಪುಟ್ಟಸ್ವಾಮಿ, ಲೂರ್ದುಸ್ವಾಮಿ, ಸೇಟು, ಪೀಟರ್, ಅಂತೋನಿ ಸ್ವಾಮಿ, ಶಿವಣ್ಣ, ಪೌಲ್ ಧರ್ಮ ರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.