ADVERTISEMENT

ಹನೂರು| ಸಮಗ್ರ ನೀರಿನ ಅಭಿವೃದ್ಧಿಗೆ ಒತ್ತಾಯ: ಅಹೋರಾತ್ರಿ ಧರಣಿ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:29 IST
Last Updated 10 ನವೆಂಬರ್ 2025, 2:29 IST
ಹನೂರು ತಾಲೂಕಿನಲ್ಲಿ ಸಮಗ್ರ ನೀರಿನ ಅಭಿವೃದ್ಧಿಗೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ 14ನೇ ದಿನವೂ ಮುಂದುವರೆದಿದೆ
ಹನೂರು ತಾಲೂಕಿನಲ್ಲಿ ಸಮಗ್ರ ನೀರಿನ ಅಭಿವೃದ್ಧಿಗೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ 14ನೇ ದಿನವೂ ಮುಂದುವರೆದಿದೆ   

ಹನೂರು: ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿಯಿಂದ ಸಮಗ್ರ ನೀರಾವರಿ ಅಭಿವೃದ್ಧಿಗೆ ಒತ್ತಾಯಿಸಿ ರೈತ ಸಂಘಟನೆ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ 14ನೇ ದಿನವೂ ಮುಂದುವರೆದಿದೆ.

ಅಹೋರಾತ್ರಿ ಧರಣಿಗೆ ಬಿದರಹಳ್ಳಿ ಗ್ರಾಮದ ನಾಗriಕರು ಹಾಗೂ ಚರ್ಚ್ ಫಾದರ್ ಮಾರ್ಷಲ್ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಿದರು.

ಪಳನಿ ಮೇಡು ರೈತ ಸಂಘದ ಮಹಿಳಾ ಘಟಕಕದ ಪದಾಧಿಕಾರಿಗಳು ಚಳವಳಿಯಲ್ಲಿ ಭಾಗವಹಿಸಿದ್ದರು.

ADVERTISEMENT

ಗ್ರಾಮೀಣ ಭಾಗದಲ್ಲಿರುವ ನೀರಿನ ಸಮಸ್ಯೆಗಳನ್ನು ಬಗೆಹರಿಸದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನಡೆ ಖಂಡಿಸಿ ಇಂದಿಗೆ 14 ದಿನಗಳಿಂದ ಅಹೋರಾತ್ರಿ ಶಾಂತಿಯುತ ಧರಣಿ ನಡೆಸಲಾಗುತ್ತಿದೆ.

ಮೂಲ ಸೌಲಭ್ಯ ಕಲ್ಪಿಸುವಂತೆ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಬಿದರಹಳ್ಳಿ ನಾಗರಿಕರು ಪಾದಯಾತ್ರೆ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ ಸರ್ಕಾರ, ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲ್ಲಿ ಸುಳ್ವಾಡಿ ಹಾಗೂ ಬಿದರಹಳ್ಳಿ ಚರ್ಚ್ ಧರ್ಮ ಗುರುಗಳು, ಮಹಿಳಾ ರೈತ ಸಂಘಟನೆಯ ಕನಕ, ಮಾಜಿ ಸೈನಿಕ ಜೋಸೆಫ್, ಶೈಲೇಂದ್ರ, ಅರ್ಪುತರಾಜ್, ಪುಟ್ಟಸ್ವಾಮಿ ದಿವ್ಯಾನಂದ, ಪೀಟರ್, ಸೂಸೈ ಮಾಣಿಕ್ಯಂ, ಜಾನ್ ಜೋಸೆಫ್, ಶಿವಣ್ಣ, ಜೈದೀಪ್, ಜೋಸ್ವಾ, ರಾಜು, ಲಾಸಾರ್, ಜಪಮಾಲೆ, ಕೊಳಂದೈ ತೆರೆಸಾ, ಶೆಲ್ವ ಮೇರಿ, ರಜಿನಾ ಮೇರಿ, ಲೂರ್ದುಮೇರಿ, ರಾಜಣ್ಣ, ಚಿನ್ನ ತಾಯಿ, ಮಾದಮ್ಮ, ಮೈಲ, ಪ್ರೇಮ, ಪರಿಮಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.