ADVERTISEMENT

ಹನೂರು | ಕಾಡು ಹಂದಿ ಬೇಟೆ: ಮಗ ಬಂಧನ, ತಂದೆ ಪರಾರಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 16:00 IST
Last Updated 21 ಜನವರಿ 2025, 16:00 IST
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯದಾಮದಲ್ಲಿ ಕಾಡು ಹಂದಿ ಬೇಟೆಯಡಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿರುವುದು.
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯದಾಮದಲ್ಲಿ ಕಾಡು ಹಂದಿ ಬೇಟೆಯಡಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿರುವುದು.   

ಹನೂರು: ಮಲೆ ಮಹದೇಶ್ವರ ವ್ಯನ್ಯಧಾಮದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿದ್ದ ಅಜ್ಜೀಪುರ ಗ್ರಾಮದ ಪಳನಿಸ್ವಾಮಿಯನ್ನು ಸೋಮವಾರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

 ಆರೋಪಿ ಪಚ್ಚೆದೊಡ್ಡಿ ಗಸ್ತಿನ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ ಅದನ್ನು ತೋಟದ ಮನೆಗೆ ತಂದು ಮಾಂಸ ಸಿದ್ಧಪಡಿಸುತ್ತಿದ್ದ ಮಾಹಿತಿಯಂತೆ  ಸಿಬ್ಬಂದಿ ತೋಟದ ಮನೆಗೆ ತೆರಳಿ ಬಂಧಿಸಿದ್ದರು.  ಹಂದಿ ಮಾಂಸ, ಬೇಟೆಗೆ ಬಳಸಿದ್ದ ಮಾರಕಾಯುಧಗಳನ್ನು ವಶಪಡಿಸಲಾಗಿದೆ. ಪಳನಿಸ್ವಾಮಿಯ ತಂದೆ ವೆಂಕಟೇಶ್ ತಲೆಮರೆಸಿಕೊಂಡಿದ್ದು, ಆರೋಪಿಗೆ ಕೋರ್ಟ್‌  ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸಂದೀಪ್, ವಿನಾಯಕ್ ವನಪಾಲಕರಾದ ಹನೂರು ವಿಭಾಗದ ನಂದೀಶ್,ಐಸಿಟಿ ಉಪ ವಲಯ ಅರಣ್ಯಾಧಿಕಾರಿ  ಗಿರೀಶ್. ಬೀಟ್ ಗಾರ್ಡ್ ಭೀಮಸಿ, ಅನಿಲ್ ಕುಮಾರ್ ಹಾಗೂ ಚಿನ್ನಸ್ವಾಮಿ, ಮತ್ತು ವಾಚರ್ ಪ್ರಭು, ಆನೆ ಕಾರ್ಯಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.