ADVERTISEMENT

‘ಚಂದ್ರನ ಅಂಗಳದಲ್ಲಿ ದಾಖಲೆ ಬರೆದ ಭಾರತ’

ಎಸ್‌ಡಿವಿಎಸ್ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 14:41 IST
Last Updated 23 ಆಗಸ್ಟ್ 2024, 14:41 IST
ಯಳಂದೂರು ಪಟ್ಟಣದ ಎಸ್‌ಡಿವಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ರಾಕೆಟ್ ಮತ್ತು ಲ್ಯಾಂಡರ್ ಮಾದರಿ ಪ್ರದರ್ಶಿಸಲಾಯಿತು. ಮಲ್ಲಿಕಾರ್ಜುನ್, ಪರಶಿವಮೂರ್ತಿ ಭಾಗವಹಿಸಿದ್ದರು
ಯಳಂದೂರು ಪಟ್ಟಣದ ಎಸ್‌ಡಿವಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ರಾಕೆಟ್ ಮತ್ತು ಲ್ಯಾಂಡರ್ ಮಾದರಿ ಪ್ರದರ್ಶಿಸಲಾಯಿತು. ಮಲ್ಲಿಕಾರ್ಜುನ್, ಪರಶಿವಮೂರ್ತಿ ಭಾಗವಹಿಸಿದ್ದರು   

ಯಳಂದೂರು: ಭಾರತದ ವಿಜ್ಞಾನಿಗಳು ಚಂದ್ರಯಾನ ಕಾರ್ಯಕ್ರಮವನ್ನು ಕಡಿಮೆ ವೆಚ್ಚದಲ್ಲಿ ಪೂರೈಸಿ, ಚಂದ್ರಮನ ಅಂಗಳದಲ್ಲಿ ದಾಖಲೆ ಬರೆದಿದ್ದಾರೆ ಎಂದು ಎಸ್‌ಡಿವಿಎಸ್ ಪ್ರಾಂಶುಪಾಲ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಪಟ್ಟಣದ ಎಸ್‌ಡಿವಿಎಸ್ ಶಾಲೆಯಲ್ಲಿ ಗುರುವಾರ ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಿದ ಸ್ಮರಣಾರ್ಥ ಆಯೋಜಿಸಿದ್ದ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ರೊ ಸಂಸ್ಥೆಗೆ ಮಹತ್ವದ ಚರಿತ್ರೆ ಇದೆ. ಭಾರತ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ಡಾ. ವಿಕ್ರಂ ಸಾರಾಭಾಯಿ ಅವರ ದೂರದೃಷ್ಟಿಯ ಫಲವಾಗಿ ಇಸ್ರೊ ಉದಯಿಸಿತು. ಸೈಕಲ್ ಮೂಲಕ ರಾಕೆಟ್ ಸಾಗಿಸಿ ಮೇಲೇರಿಸುವ ಮೂಲಕ ಭಾರತದ ವಿಜ್ಞಾನಿಗಳು ಮನೆ ಮಾತಾದರು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿ ಇದೆ ಎಂದರು.

ADVERTISEMENT

ವಿಜ್ಞಾನ ಶಿಕ್ಷಕ ಪರಶಿವಮೂರ್ತಿ, ‘ಇಸ್ರೊ ಸಂಸ್ಥೆ 2023ರ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಸಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಈ ಸಾಧನೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಪಡೆಯಿತು. ಭವಿಷ್ಯದಲ್ಲಿ ಗಗನ ಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವುದು ಹಾಗೂ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಉದ್ದೇಶ ಇದೆ. ಮಾನವನನ್ನು ಚಂದ್ರಗ್ರಹದ ಮೇಲೆ ಕಳುಹಿಸುವ ಮಹತ್ತರ ಯೋಜನೆಗೆ ಇಸ್ರೊ ಸಿದ್ಧತೆ ನಡೆಸಿದ್ದು, ಇಂದಿನ ಯುವ ಪೀಳಿಗೆಗೆ ಸ್ಫೂರ್ತಿತಿಯಾಗಿದೆ’ ಎಂದರು.

ಅಮೃತ, ವಿದ್ಯಾರ್ಥಿಗಳಾದ ಪ್ರೇಕ್ಷಾ, ಚಿದಾನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.