ADVERTISEMENT

ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಿ    

ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:22 IST
Last Updated 24 ಜನವರಿ 2026, 2:22 IST
ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದ ಎಂ.ಸಂಗಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಈಚೆಗೆ ಉದ್ಘಾಟಿಸಿದರು.
ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದ ಎಂ.ಸಂಗಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಈಚೆಗೆ ಉದ್ಘಾಟಿಸಿದರು.   

ಸಂತೇಮರಹಳ್ಳಿ: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ  ಆದ್ಯತೆ ನೀಡುತ್ತಿದ್ದು, ಇದರ ಪ್ರಯೋಜನ ಪಡೆದು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

 ಕುದೇರು ಸರ್ಕಾರಿ ಎಂ.ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. 

ಗ್ರಾಮದಲ್ಲಿ ಪದವಿ ಕಾಲೇಜು, ಬ್ಯಾಂಕ್, ಉಪನೋಂದಣಿ ಕಚೇರಿ, ಪೊಲೀಸ್ ಠಾಣೆ ಸೌಲಭ್ಯಗಳಿವೆ.  ಕಾಲೇಜಿನಲ್ಲಿ ಕಟ್ಟಡ ಸಮಸ್ಯೆ ನಡುವೆಯೂ ಉತ್ತಮ ಫಲಿತಾಂಶ ಲಭಿಸಿದೆ. ಜಿಲ್ಲೆಗೆ ಮಾದರಿ ಕಾಲೇಜು ಎಂಬ ಹೆಸರು ಪಡೆದುಕೊಂಡಿದೆ. 2020–21ನೇ ಸಾಲಿನಲ್ಲಿ ₹1.31 ಕೋಟಿ ವೆಚ್ಚದಲ್ಲಿ ಕೊಠಡಿಯನ್ನು ನಿರ್ಮಾಣ   ಈ ಬಾರಿಯೂ ಜಿಲ್ಲೆಗೆ ಉತ್ತಮ ಫಲಿತಾಂಶ ನೀಡಬೇಕು.   ₹2 ಕೋಟಿ ಅನುದಾನ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಪ್ರಾಂಶುಪಾಲ ಶಿವಪ್ರಕಾಶ್, ಲೋಕೋಪಯೋಗಿ ಇಲಾಖೆ ಇಇ ಕಿರಣ್, ಎಇಇ ಶಾಂತಮ್ಮ, ಕಿರಿಯ ಎಂಜಿನಿಯರ್ ರಘು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಸುರೇಶ್, ಸದಸ್ಯರಾದ ಕೆ.ಎಂ.ರಾಜೇಂದ್ರ ಸ್ವಾಮಿ, ಮಹದೇವಯ್ಯ, ಚೇತನ್‌ಕುಮಾರ್, ಕೆ.ಎಂ.ಅಶೋಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲನಾಗರಾಜು, ಉಪಾಧ್ಯಕ್ಷ ಸುನೀಲ್‌ಕುಮಾರ್, ದೇಮಹಳ್ಳಿ ಗ್ರಾಮಪಂಚಾಯಿತಿ ಸದಸ್ಯೆ ಸುಮಿತ್ರಾ, ಪ್ರಜಾಪ್ರತಿನಿಧಿ ಅಧ್ಯಕ್ಷ ಸಂತೇಮರಹಳ್ಳಿ ಪಶಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ವಾಸುಪಾಲ್, ಮುಖಂಡರಾದ ನಾಗರಾಜು, ಶಿವಕುಮಾರ್, ನೇಮ್‌ಜೀ, ಗಣಗನೂರು ನಾಗಯ್ಯ, ಕೆಂಪರಾಜು, ಯಲಕ್ಕೂರು ಮಧು, ಬಡಗಲಮೋಳೆ ಶಿವಣ್ಣ, ಕೈಲಾಸ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.