ADVERTISEMENT

ಸಂಪುಟ ಸದಸ್ಯರು ದೇವಾಲಯಕ್ಕೆ, ಮಹದೇವಪ್ಪ ಕಾಲೊನಿಗಳಿಗೆ 

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 15:36 IST
Last Updated 24 ಏಪ್ರಿಲ್ 2025, 15:36 IST
ಸಚಿವ ಮಹದೇವ‍ಪ್ಪ ಜನತಾ ಕಾಲೊನಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲು ಆಲಿಸಿದರು
ಸಚಿವ ಮಹದೇವ‍ಪ್ಪ ಜನತಾ ಕಾಲೊನಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲು ಆಲಿಸಿದರು   

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ನಾಡಿನ ಐತಿಹಾಸಿಕ ತಾಣವಾದ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆಗೆ ಬಂದಿದ್ದ ಬಹುತೇಕ ಸಚಿವರು, ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಕಾಲೊನಿಗಳಿಗೆ ತೆರಳಿ ಅಲ್ಲಿನ ನಿವಾಸಿಗಳೊಂದಿಗೆ ಸಭೆ ನಡೆಸಿದರು. 

ಸಹಜವಾಗಿ ಇಲ್ಲಿಗೆ ಆಗಮಿಸಿದ ಸಚಿವರೆಲ್ಲರೂ ದೇವಾಲಯಕ್ಕೆ ತೆರಳಿ ದರ್ಶನ ಪಡೆಯುವುದು ವಾಡಿಕೆ. ಸಚಿವರೆಲ್ಲಾ ಒಬ್ಬೊಬ್ಬರಾಗಿ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಮಹದೇವಪ್ವ ಅವರು ವಿಭಿನ್ನವಾಗಿ ಬೆಟ್ಟಕ್ಕೆ ಹತ್ತಿರ ಇರುವ ಬುಡಕಟ್ಟು ಸಮುದಾಯಗಳ ಜನತಾ ಕಾಲೊನಿಗೆ ಭೇಟಿ ನೀಡಿ, ಸಂಕಷ್ಟಗಳನ್ನು ಆಲಿಸಿದರು.

ಸುಮಾರು ಒಂದು ಗಂಟೆಯ ಕಾಲ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ ಸಚಿವರು, ಜನತಾ ದೇವಾಲಯಕ್ಕೆ ತೆರಳಿ ಅವರನ್ನು ಆಲಿಸಿದ್ದು ಅತ್ಯಂತ ವಿಶೇಷವಾಗಿತ್ತು.

ADVERTISEMENT

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನಕ್ಕಿಂತಲೂ ಜನರ ಬಳಿ ಹೋಗುವುದು ಹೆಚ್ಚು ಪೂರಕವಾದಂತ ಸಂಗತಿಯಾಗಿದ್ದು, ಜನರ ಮಾತುಗಳೇ ದೈವದ ಮಾತಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.