ADVERTISEMENT

ಚಾಮರಾಜನಗರ: ನಗರದಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 15:58 IST
Last Updated 29 ಸೆಪ್ಟೆಂಬರ್ 2020, 15:58 IST
ಚಾಮರಾಜನಗರದ ನಗರಸಭೆ ಕಚೇರಿ ಬಳಿ ಚರಂಡಿ ಕಟ್ಟಿಕೊಂಡ ಕಾರಣ ಕೊಳಚೆ ನೀರಿನೊಂದಿಗೆ ಬೆರೆದ ಮಳೆ ನೀರು ರಸ್ತೆಗೆ ಹರಿಯಿತು
ಚಾಮರಾಜನಗರದ ನಗರಸಭೆ ಕಚೇರಿ ಬಳಿ ಚರಂಡಿ ಕಟ್ಟಿಕೊಂಡ ಕಾರಣ ಕೊಳಚೆ ನೀರಿನೊಂದಿಗೆ ಬೆರೆದ ಮಳೆ ನೀರು ರಸ್ತೆಗೆ ಹರಿಯಿತು   

ಚಾಮರಾಜನಗರ: ಬಹು ದಿನಗಳ ನಂತರ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಮಳೆಯಾಗಿದೆ.

ನಗರದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಯಳಂದೂರು, ಕೊಳ್ಳೇಗಾಲದ ಸುತ್ತಮುತ್ತ ತುಂತುರು ಮಳೆಯಾಗಿದೆ. ಮಹದೇಶ್ವರ ಬೆಟ್ಟದಲ್ಲೂ ವರ್ಷಧಾರೆ ಸುರಿದಿದೆ. ಬಿಳಿಗಿರಿ ರಂಗನಬೆಟ್ಟದಲ್ಲಿ ರಾತ್ರಿ ಮಳೆಯಾಗಿದೆ.

ಎರಡು ವಾರಗಳಿಂದ ಹೆಚ್ಚು ಮಳೆಯಾಗಿರಲಿಲ್ಲ. ಬಿಸಿಲಿನ ವಾತಾವರಣ ಇತ್ತು. ಮೋಡ ಕವಿದ ವಾತಾವರಣ ಇದ್ದರೂ, ಕೆಲವು ಹನಿಗಳು ಬಿದ್ದು, ಮಳೆ ದೂರವಾಗುತ್ತಿತ್ತು.

ADVERTISEMENT

ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ಬ 3.30ವರೆಗೂ ಬಿಸಿಲು ಇತ್ತು. ನಾಲ್ಕು ಗಂಟೆಯ ನಂತರ ಮೋಡ ಕವಿಯಲು ಆರಂಭವಾಯಿತು. 4.30ರ ನಂತರ ಸಣ್ಣದಾಗಿ ಆರಂಭವಾದ ಮಳೆ ಐದು ಗಂಟೆಯ ವೇಳೆಗೆ ಬಿರುಸು ಪಡೆದು, ಉತ್ತಮವಾಗಿ ಮಳೆಯಾಯಿತು.ವಾಹನಗಳು ಜನರ ಸಂಚಾರಕ್ಕೆ ಸ್ವಲ್ಪ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.