ADVERTISEMENT

ಕನ್ನಡ ಎಂಎ: ಕೆಂಪರಾಜುಗೆ ಆರು ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 12:26 IST
Last Updated 24 ಅಕ್ಟೋಬರ್ 2020, 12:26 IST
ಚಿನ್ನದ ಪದಕಗಳೊಂದಿಗೆ ಕೆಂಪರಾಜು
ಚಿನ್ನದ ಪದಕಗಳೊಂದಿಗೆ ಕೆಂಪರಾಜು   

ಚಾಮರಾಜನಗರ: ಯಡಪುರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ, ಕಾಗಲವಾಡಿಯ ಕೆ.ಜಿ.ಕೆಂಪರಾಜು ಅವರು 2019ನೇ ಸಾಲಿನ ಕನ್ನಡ ಎಂ.ಎನಲ್ಲಿ ಆರು ಚಿನ್ನದ ಪದಕಗಳು ಹಾಗೂ ನಾಲ್ಕು ನಗದು ಬಹುಮಾನಗಳನ್ನುಮೈಸೂರು ವಿಶ್ವವಿದ್ಯಾಲಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ.

ಇತ್ತೀಚೆಗೆ ನಡೆದ ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ಪದವಿಯನ್ನು ಸ್ವೀಕರಿಸಿದ್ದಾರೆ. ಕೆಂಪರಾಜು ಅವರು 2017–18ರಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದರು.

ವಿದ್ಯಾರ್ಥಿಯ ಸಾಧನೆಗೆ ಕೇಂದ್ರ ನಿರ್ದೇಶಕ ಪ್ರೊ.ಶಿಬಸವಯ್ಯ, ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಮೂರ್ತಿ ಹನೂರು, ಪ್ರಾಧ್ಯಾಪಕದ ಡಾ.ಪಿ.ಮಹೇಶ್‌ಬಾಬು, ಬಸವಣ್ಣ ಎಂ.ಎಸ್‌., ಗುರುರಾಜು ಬಿ, ರಾಣಿ ಅಭಿನಂದಿಸಿದ್ದಾರೆ.

ADVERTISEMENT

‘ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗಕ್ಕೆಂದೇ ನಿರ್ಮಿಸಲಾದ ‘ದೇವಚಂದ್ರ ಗ್ರಂಥಾಲಯ’ದಿಂದ ಅಧ್ಯಯನಕ್ಕೆ ತುಂಬಾ ಅನುಕೂಲವಾಗಿದೆ’ ಎಂದು ಕೆಂಪರಾಜು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.