ADVERTISEMENT

ಬೆಂಬಲ ಬೆಲೆಯಲ್ಲಿ ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿ

​ಪ್ರಜಾವಾಣಿ ವಾರ್ತೆ
Published 16 ಮೇ 2020, 17:41 IST
Last Updated 16 ಮೇ 2020, 17:41 IST

ಚಾಮರಾಜನಗರ: ಕರ್ನಾಟಕ ಹಾಲು ಮಹಾ ಮಂಡಳಿಯು (ಕೆಎಂಎಫ್‌) ಪಶು ಆಹಾರ ತಯಾರಿಕೆಗೆ ಮುಖ್ಯ ಕಚ್ಚಾ ಪದಾರ್ಥವಾದ ಮೆಕ್ಕೆಜೋಳವನ್ನು ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ₹1,760ರಂತೆ ರೈತರಿಂದ ನೇರವಾಗಿ ಖರೀದಿ ಮಾಡುತ್ತಿದೆ.

ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ಸಣ್ಣ ಮತ್ತು ಅತಿಸಣ್ಣ ರೈತರು, ಹಾಲು ಉತ್ಪಾದಕರು ಕೃಷಿ ಇಲಾಖೆಯಿಂದ ನೀಡುವ ತಂತ್ರಾಂಶದ ಐ.ಡಿ ಹಾಗೂ ಮೆಕ್ಕೆಜೋಳದ 1 ಕೆ.ಜಿ ಮಾದರಿಯನ್ನು ತಮ್ಮ ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಯವರ ಮೂಲಕ ಒಕ್ಕೂಟಕ್ಕೆ ಸಲ್ಲಿಸಬೇಕು. ಒಕ್ಕೂಟವು ಮಾದರಿ ಗುಣಮಟ್ಟದ ಪರಿಶೀಲನೆಗಾಗಿ ‌ಹಾಸನದಲ್ಲಿರುವಕೆಎಂಎಫ್ ಪಶು ಆಹಾರ ಘಟಕಕ್ಕೆ ರವಾನಿಸಿ ರೈತರು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಫಲಿತಾಂಶ ಕಳುಹಿಸಲಿದೆ.

ಮಾದರಿ ಉತ್ತೀರ್ಣಗೊಂಡಲ್ಲಿ ಎಸ್ಎಂಎಸ್‌ನಲ್ಲಿ ತಿಳಿಸಲಾಗುವ ದಿನಾಂಕದಂದು ನಿಬಂಧನೆಗೊಳಪಟ್ಟು ಖುದ್ದಾಗಿ ತಾವೇ ಹಾಸನ ಪಶು ಆಹಾರ ಘಟಕಕ್ಕೆ ಮೆಕ್ಕೆಜೋಳವನ್ನು ಸರಬರಾಜು ಮಾಡಬೇಕು. ಮಾಹಿತಿಗಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ ಅಥವಾ ಒಕ್ಕೂಟದ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.